ದಿ| ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಅಹ್ವಾನ

Spread the love

ದಿ| ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಅಹ್ವಾನ

ಉಡುಪಿ: ದಿ| ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ್ ಮತ್ತು ಕಥೋಲಿಕ್ ಸಭಾ ಉಡುಪಿ ಪ್ರದೇಶ (ರಿ.)ಇದರ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯಮಟ್ಟದ “ದಿ| ಫ್ರಾನ್ಸಿಸ್‍ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ”ಕ್ಕೆ ಕಥೋಲಿಕ್ ಕೊಂಕಣಿ ಕ್ರೈಸ್ತರಿಂದ 2020 ಜನವರಿಯಿಂದ ಡಿಸೆಂಬರ್ 2020 ವರೆಗೆ ಪ್ರಕಟಪಡಿಸಿದ ಕನ್ನಡ  ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ.

ಪುರಸ್ಕಾರಕ್ಕೆ ಯೋಗ್ಯವಾದ ಕೃತಿಗಳು – ಧಾರ್ಮಿಕ, ವೈಚಾರಿಕ, ವೈಜ್ಞಾನಿಕ, ಐತಿಹಾಸಿಕ, ಸಮಾಜಶಾಸ್ತ್ರ, ಜಾನಪದ ಅಧ್ಯಯನ, ಜೀವನಚರಿತ್ರೆ, ವ್ಯಕ್ತಿಚಿತ್ರಣ, ಸಂಪಾದಿತ ಕೃತಿಗಳ ಸಂಗ್ರಹ, ಕೊಂಕಣಿಯಿಂದ ಭಾಷಾಂತರಿತ ಕೃತಿಗಳು, ಕಥಾ ಸಂಗ್ರಹ, ಕಾದಂಬರಿ, ಕಾವ್ಯ ಸಂಗ್ರಹ, ನಾಟಕ, ಕಿರು ನಾಟಕ ಸಂಗ್ರಹ ಕಳುಹಿಸಬಹುದು. ಒಂದು ಬಾರಿ ಪ್ರಶಸ್ತಿ ಪಡೆದ ವ್ಯಕ್ತಿ ಪುನ: ಭಾಗವಹಿಸಲು ಅವಕಾಶವಿರುವುದಿಲ್ಲ.

ಪ್ರಶಸ್ತಿ ರು. 25,000/-ನಗದು, ಸ್ಮರಣಿಕೆ ನೀಡಿ ಶಾಲು ಹೊದಿಸಿ ಕಥೋಲಿಕ್ ಸಭಾ ಉಡುಪಿ ಪ್ರದೇಶದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿಸಲಾಗುವುದು.

ತಮ್ಮ ಕೃತಿಗಳ ಮುದ್ರಿತ 4 ಪ್ರತಿಗಳನ್ನು 30 ಮಾರ್ಚ್ 2021ರ ಒಳಗೆ ಆಲಿಸ್ ರೊಡ್ರಿಗಸ್, ಸಂಚಾಲಕರು, “ದಿ| ಫ್ರಾನ್ಸಿಸ್‍ದಾಂತಿ ಸ್ಮಾರಕ ಪ್ರತಿಷ್ಠಾನ”, ಕಥೋಲಿಕ್ ಸಭಾ ಉಡುಪಿ ಪ್ರದೇಶ (ರಿ.), ಬಿಷಪ್‍ರ ನಿವಾಸ, 3ನೇ ಮಹಡಿ, ವಿದ್ಯಾಜ್ಯೋತಿ ಕಟ್ಟಡ, ಉಡುಪಿ – 576101 ಈ ವಿಳಾಸಕ್ಕೆ ಕಳುಹಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಆಲಿಸ್ ರೊಡ್ರಿಗಸ್- 9880793142

 


Spread the love