ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿಗಳು ಪೊಲೀಸ್ ವಶಕ್ಕೆ

Spread the love

ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿಗಳು ವಶಕ್ಕೆ

ಮಂಗಳೂರು : ಮಂಗಳೂರು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ 2 ನೇ ಬ್ಲಾಕ್ ನಲ್ಲಿ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.

 

ದಿನಾಂಕ: 03-01-2018 ರಂದು ಮದ್ಯಾಹ್ನ 13-15 ಗಂಟೆಗೆ ಮಂಗಳೂರು ಕಾಟಿಪಳ್ಳ 2 ನೇ ಬ್ಲಾಕ್ ನ ಅಬ್ದುಲ್ ಮಜೀದ್ ಎಂಬವರ ಮನೆಯ ಎದುರು ಅವರ ಮೊಬೈಲ್ ಅಂಗಡಿಯ ಕರೆನ್ಸಿಯ ಹಣವನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ದೀಪಕ್ ರಾವ್ (30) ಎಂಬವನು ಆತನ ಬೈಕ್ ನಂಬ್ರ: ಕೆಎ-19-ಇಹೆಚ್-6518ರಲ್ಲಿ ಅಬ್ದುಲ್ ಮಜೀದ್ ರವರ ಮನೆಗೆ ಬರುತ್ತಿದ್ದ ಸಮಯ ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಬಂದ 4 ಮಂದಿ ಏಕಾಎಕಿ ಕಾರಿನಿಂದ ತಲವಾರಿನೊಂದಿಗೆ ಇಳಿದು ದೀಪಕ್ ರಾವ್ ನ ಬೈಕ್ ನ್ನು ಅಡ್ಡಗಟ್ಟಿ ತಲವಾರಿನಿಂದ ಗಂಭೀರ ಹಲ್ಲೆ ನಡೆಸಿದ್ದು, ಗಾಯಗೊಂಡ ದೀಪಕ್ ರಾವ್ ನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಕೃತ್ಯಕ್ಕೆ ಸಂಬಂಧಪಟ್ಟಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವು ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಕೃತ್ಯ ನಡೆದ ಬಗ್ಗೆ ಮಾಹಿತಿ ಪಡೆದ ಸುರತ್ಕಲ್ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಸಾರ್ವಜನಿಕರಿಂದ ಮಾಹಿತಿ ಪಡೆದು ದೀಪಕ್ ರಾವ್ ನ ಕೊಲೆ ನಡೆಸಿದವರು ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಬಂದು ಈ ಕೊಲೆ ಕೃತ್ಯವನ್ನು ನಡೆಸಿದ ಬಗ್ಗೆ ನಗರ ನಿಯಂತ್ರಣ ಕೊಠಡಿ ಮೂಲಕ ಸಂದೇಶವನ್ನು ಮಂಗಳೂರಿನ ಎಲ್ಲಾ ಪೊಲೀಸ್ ಠಾಣೆಗೆ ಭಿತ್ತರಿಸಿದ್ದು, ಈ ಸಂದೇಶದಂತೆ ಕಾರ್ಯಪ್ರವೃತ್ತರಾದ ಮಂಗಳೂರು ನಗರ ಪೊಲೀಸರು ಮಂಗಳೂರು ನಗರದ ಎಲ್ಲಾ ಕಡೆ ಬ್ಯಾರಿಕೇಡ್ ಹಾಕಿ ವಾಹನವನ್ನು ತಪಾಸಣೆ ಮಾಡುತ್ತಿದ್ದ ಸಮಯ ಆರೋಪಿಗಳು ಸಂಚರಿಸಿದ ಕಾರು ಕೆಎ-19-ಎಂಡಿ-5235 ಎಂಬುದಾಗಿ ನಗರ ನಿಯಂತ್ರಣ ಕೊಠಡಿಯಿಂದ ಬಂದ ಮಾಹಿತಿಯಂತೆ ನಗರದ ಪೊಲೀಸರು ಹುಡುಕಾಡುತ್ತಿದ್ದ ಸಮಯ ಈ ಕಾರು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಂಜೆ ಎಂಬ ಸ್ಥಳದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಮುಲ್ಕಿ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಶೀತಲ್ ರವರ ಮುಂದುಗಡೆಯಿಂದ  ಈ ಕಾರು ಬರುತ್ತಿದ್ದುದ್ದನ್ನು ನೋಡಿ ಅವರು ನಿಲ್ಲಿಸಲು ಜೀಪಿನಿಂದ ಇಳಿದು ಸೂಚಿಸಿದಾಗ ಆ ಕಾರಿನ ಚಾಲಕನು ನಿಲ್ಲಿಸದೇ ಮುಲ್ಕಿ ಪಿಎಸ್ಐ ಶೀತಲ್ ರವರ ಮೇಲೆ ವಾಹನವನ್ನು ಹಾಯಿಸಿ ಕೊಂಡು ಹೋಗಲು ಪ್ರಯತ್ನಿಸಿದ ಸಮಯ ಅವರ ಬಲಕೈಗೆ ಹಾಗೂ ಬೆರಳಿಗೆ ಗಾಯವಾಗಿದ್ದು,  ತನ್ನ ಆತ್ಮ ರಕ್ಷಣೆಗಾಗಿ ಪಿಸ್ತೂಲ್ ನಿಂದ 5 ರೌಂಡ್ಸ್ ಆ ಕಾರಿಗೆ ಫೈರ್ ಮಾಡಿ ನಂತರ  ಆರೋಪಿಗಳ ಕಾರನ್ನು ಬೆನ್ನಟ್ಟಿ ಕಾರಿನಲ್ಲಿದ್ದವರ ಪೈಕಿ ಕಿನ್ನಿಗೋಳಿ ನಿವಾಸಿ ಮೊಹಮ್ಮದ್ ನೌಷದ್ (22), ಕೃಷ್ಣಾಪುರ ನಿವಾಸಿ ಮೊಹಮ್ಮದ್ ಇರ್ಷಾನ್ @ ಇರ್ಶಾ, (21), ಎಂಬವರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಈ ಕಾರಿನಲ್ಲಿದ್ದವರ ಪೈಕಿ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾದ ಮೊಹಮ್ಮದ್ ನವಾಸ್ @ ಪಿಂಕಿ ನವಾಸ್ ಮತ್ತು ರಿಜ್ವಾನ್ ಎಂಬವರು ಕಾರಿನಿಂದ ಓಡಿಹೋಗಿದ್ದರು.

ಓಡಿ ಹೋದ ಆರೋಪಿಗಳ ಪತ್ತೆ ಕಾರ್ಯವನ್ನು ಮಂಗಳೂರು ನಗರ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತರಾಮ ಮತ್ತು ತಂಡ ಹಾಗೂ ಪಣಂಬೂರು ಇನ್ಸ್‌ಪೆಕ್ಟರ್ ರಫೀಕ್‌ ಹಾಗೂ ಅವರ ತಂಡವು ಹುಡುಕಾಟ ನಡೆಸುತ್ತಿದ್ದ ಸಮಯ  ಬಡಗ ಎಡಪದವು ದಡ್ಡಿ ಗುರಿ ಎಂಬಲ್ಲಿ ಈ ಆರೋಪಿಗಳು ಇದ್ದಾರೆಂಬ ಮಾಹಿತಿಯಂತೆ ಪೊಲೀಸರು ಆ ಸ್ಥಳಕ್ಕೆ ಹೋಗಿ ಆರೋಪಿಗಳಾದ  ಮೊಹಮ್ಮದ್ ನವಾಸ್ @ ಪಿಂಕಿ ನವಾಸ್ ಮತ್ತು ರಿಜ್ವಾನ್ ಎಂಬವರು ತಲವಾರಿನಿಂದ ಹಲ್ಲೆ ನಡೆಸಲು ಪ್ರಯತ್ನಿಸಿದ ಸಮಯ ಪೊಲೀಸರು ಅವರಿಗೆ ಶರಣಾಗುವಂತೆ ಸೂಚನೆ ನೀಡಿದರೂ ಅವರು ಅವರ ಕೈಯಲ್ಲಿದ್ದ ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿದ ಸಮಯ ಸಿಸಿಬಿ ಇನ್ಸ್ ಪೆಕ್ಟರ್ ಶಾಂತರಾಮ್ ಮತ್ತು ಪಣಂಬೂರು ಇನ್ಸ್ ಪೆಕ್ಟರ್ ರಫೀಕ್ ರವರು ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದ್ದು,ಈ ಘಟನೆಯಿಂದ ಕೃಷ್ಣಾಪುರ, ಕಾಟಿಪಳ್ಳ ನಿವಾಸಿ ಮೊಹಮ್ಮದ್ ನವಾಸ್ @ ಪಿಂಕಿ ನವಾಸ್, (23), ರಿಜ್ವಾನ್ @ ಇಜ್ಜು @ ರಿಜ್ಜು, (24 ) ಪಿಂಕಿ ನವಾಸ್ ಮತ್ತು ನವಾಸ್ ಗೆ ಕಾಲಿಗೆ ಗುಂಡು ತಗುಲಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ  ಸಿಸಿಬಿ ಇನ್ಸ್ ಪೆಕ್ಟರ್ ಶಾಂತರಾಮ ರವರು ಆರೋಪಿಗಳ ವಿರುದ್ಧ ನೀಡಿದ ದೂರಿನಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆರೋಪಿಗಳ ಪೂರ್ವ ಚರಿತ್ರೆ

ಆರೋಪಿಗಳ ಪೈಕಿ ಮೊಹಮ್ಮದ್ ನವಾಸ್ @ ಪಿಂಕಿ ನವಾಸ್ ಎಂಬಾತನು ವಿರುದ್ದ ಈ ಹಿಂದೆ ಕೊಣಾಜೆ, ವಿಟ್ಲ, ಬಂಟ್ವಾಳ ನಗರ, ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ಅಡಿಕೆ ಕಳ್ಳತನ ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣ, ಮಂಗಳೂರು ಜೈಲ್ ನಲ್ಲಿದ್ದ ಸಮಯ ಜೈಲ್ ಒಳಗಡೆ ಕೊಲೆ ಯತ್ನ ಪ್ರಕರಣ, ಕಾವೂರು ಪೊಲೀಸ್ ಠಾಣೆಯಲ್ಲಿ ದರೋಡೆಗೆ ಯತ್ನಿಸಿದ ಪ್ರಕರಣ ಹೀಗೆ ಒಟ್ಟು 12 ಪ್ರಕರಣಗಳುದಾಖಲಾಗಿರುತ್ತದೆ.

ಆರೋಪಿ ರಿಜ್ವಾನ್ ಎಂಬಾತನ ವಿರುದ್ದ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2016 ನೇ ಇಸವಿಯಲ್ಲಿ ಭರತ್ ರಾಜ್ ಎಂಬಾತನ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ. (ಒಟ್ಟು 4 ಪ್ರಕರಣಗಳಲ್ಲಿ 1 ಕೊಲೆ, 3 ಕೊಲೆಗೆ ಯತ್ನ.)

ಆರೋಪಿ ಮೊಹಮ್ಮದ್ ನೌಶದ್ ಎಂಬಾತನ ವಿರುದ್ದ 2017 ನೇ ಇಸವಿಯಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಮಾನಭಂಗಕ್ಕೆ ಯತ್ನಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ. (ಪ್ರಸ್ತುತ ಒಟ್ಟು 3 ಪ್ರಕರಣಗಳು 1 ಕೊಲೆ, 1 ಕೊಲೆಗೆ ಯತ್ನ, 1 ಮಾನಭಂಗ ಪ್ರಕರಣ).

ಆರೋಪಿ ಇರ್ಶಾನ್‌ ಎಂಬಾತನ ವಿರುದ್ಧ ಒಟ್ಟು 2 ಪ್ರಕರಣಗಳು ದಾಖಲಾಗಿರುತ್ತದೆ. (1 ಕೊಲೆ, 1 ಕೊಲೆಗೆ ಯತ್ನ.


Spread the love