ದೀಪಕ್ ರಾವ್ ಕೊಲೆ ಪ್ರಕರಣ ಮತ್ತೆ 6 ಆರೋಪಿಗಳ ಬಂಧನ

Spread the love

ದೀಪಕ್ ರಾವ್ ಕೊಲೆ ಪ್ರಕರಣ ಮತ್ತೆ 6 ಆರೋಪಿಗಳ ಬಂಧನ

ಮಂಗಳೂರು:   ಸುರತ್ಕಲ್ ಕಾಟಿಪಳ್ಳಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಧಿಸಿ ಪ್ರಮುಖ ಆರೋಪಿಗಳೊಂದಿಗೆ ಸಂಚು ರೂಪಿಸಿ ಕೃತ್ಯಕ್ಕೆ ಸಹಾಯ ಮಾಡಿರುವ ಆರೋಪದಲ್ಲಿ ಮತ್ತೆ 6 ಮಂದಿಯನ್ನು ದಸ್ತಗಿರಿ ಮಾಡಲಾಗಿದೆ ಎಂದು ಮಂಗಳೂರು ಪೋಲಿಸ್ ಕಮಿಷನರ್ ಟಿ ಆರ್ ಸುರೇಶ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಈಗಾಗಲೇ ದಸ್ತಗಿರಯಾಗಿರುವ ಆರೋಪಿಗಳೊಂದಿಗೆ ಸಂಚು ರೂಪಿಸಿ ಮತ್ತು ಕೃತ್ಯಕ್ಕೆ ಸಹಾಯ ಮಾಡಿರುವ ಆರೋಪಿಗಳಾದ  1)ಮೊಹಮ್ಮದ್ ರಫೀಕ್ @ ಮಾಂಗೋ ರಫೀಕ್ 2) ಇರ್ಫಾನ್  3) ಮೊಹಮ್ಮದ್ ಅನಾಸ್ @ ಅಂಚು, 4) ಮೊಹಮ್ಮದ್ ಜಾಹೀದ್ @ ಜಾಹೀ,5) ಹಿದಾಯಿತುಲ್ಲಾ, 6) ಇಮ್ರಾನ್ ನವಾಜ್, , ರವರನ್ನು ದಸ್ತಗಿರಿ ಮಾಡಲಾಗಿರುತ್ತದೆ.  ಈ ಮೇಲೆ ನಮೂದಿಸಿದ ಆರೋಪಿಗಳ ಮೇಲೆ ದಾಖಲಾದ ಪ್ರಕರಣಗಳ ವಿವರ ಈ ಕೆಳಗಿನಂತಿದೆ.

  1. ಮೊಹಮ್ಮದ್ ರಫೀಕ್ @ ಮಾಂಗೋ ರಪೀಕ್, 24 ವಷಱ, ತಂದೆ: ಮೊಹಮ್ಮದ್ ಇಸ್ಮಾಯಿಲ್, ವಾಸ: ಸಫ್ವಾನ್ ಮಂಜಿಲ್, 8 ನೇ ಬ್ಲಾಕ್, ಚೊಕ್ಕಬೆಟ್ಟು, ಸಣ್ಣ ಮಸೀದಿಯ ಬಳಿ, ಕಾಟಿಪಾಳ್ಳ, ಮಂಗಳೂರು, ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು ದಾಖಲಾಗಿರುತ್ತದೆ.
  2. ಇರ್ಫಾನ್, ತಂದೆ: ಅಬ್ದುಲ್ ರೆಹಮಾನ್, ವಾಸ: ಸೈಟ್ ನಂಬ್ರ 54, 8 ನೇ ಬ್ಲಾಕ್, ಚೊಕ್ಕಬೆಟ್ಟು, ಕಾಟಿಪಾಳ್ಳ, ಮಂಗಳೂರು

ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಯತ್ನ ಪ್ರಕರಣ ದಾಖಲಾಗಿರುತ್ತದೆ.

  1. ಮೊಹಮ್ಮದ್ ಆನಸ್, ತಂದೆ: ಅಹಮ್ಮದ್ ಹುಸೈನ್ ಭಾವ, ವಾಸ: 2 ನೇ ಬ್ಲಾಕ್, ಕಾಟಿಪಾಳ್ಳ, ಸುರತ್ಕಲ್, ಮಂಗಳೂರು ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಯತ್ನ ಪ್ರಕರಣ ಮತ್ತು ಒಂದು ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ಮತ್ತು ಮಂ.ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
  2. ಮಹಮ್ಮದ್ ಜಾಹೀದ್, ತಂದೆ: ಹಸನಬ್ಬ, ವಾಸ: ಶಹಂ ಮಂಜಿಲ್, 6 ನೇ ಬ್ಲಾಕ್, ಕಾಟಿಪಾಳ್ಳ, ಸುರತ್ಕಲ್, ಮಂಗಳೂರು

ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು, ಒಂದು ಕಳವು ಪ್ರಕರಣ ಮತ್ತು ಒಂದು ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ಮತ್ತು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿರುತ್ತದೆ.

  1. ಹಿದಾಯಿತುಲ್ಲಾ, ತಂದೆ: ಎಸ್ ಹುಸೈನ್, ವಾಸ: 7 ನೇ ಬ್ಲಾಕ್, ಕಾಟಿಪಾಳ್ಳ, ಸುರತ್ಕಲ್, ಮಂಗಳೂರು ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು ಅತ್ಯಾಚಾರ ಪ್ರಕರಣ ದಾಖಲಾಗಿರುತ್ತದೆ.
  2. ಇಮ್ರಾನ್ ನವಾಜ್, ತಂದೆ: ಟಿ.ಯೂಸೆಫ್, ವಾಸ: ಚೊಕ್ಕಬೆಟ್ಟು, ಸೈಟ್ ನಂಬ್ರ 149, ಸುರತ್ಕಲ್, ಮಂಗಳೂರು ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ 1) ಮೊಹಮ್ಮದ್ ನೌಷದ್, 2) ಮೊಹಮ್ಮದ್ ಇರ್ಷಾನ್ @ ಇರ್ಶಾ 3) ಅಬ್ದುಲ್ ಅಜೀಜ್ @ ಅಜೀಜ್, 4) ಅಬ್ದುಲ್ ಅಜೀಮ್ @ ಅಜೀಮ್ ರವರನ್ನು ದಸ್ತಗಿರಿ ಮಾಡಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುತ್ತಾರೆ.


Spread the love