ದೇವದಾಸ್ ಕಾಪಿಕಾಡ್‍ರ `ಬರ್ಸ’ ಬಿಡುಗಡೆ

Spread the love

ದೇವದಾಸ್ ಕಾಪಿಕಾಡ್‍ರ `ಬರ್ಸ’ ಬಿಡುಗಡೆ

ಮಂಗಳೂರು : ಬೊಳ್ಳಿ ಮೂವೀಸ್ ಲಾಂಛನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿ.ಕಾಪಿಕಾಡ್, ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ್ ಕಿಣಿ ನಿರ್ಮಾಣದಲ್ಲಿ ತಯಾರಾದ ಬರ್ಸ ತುಳು ಚಲನ ಚಿತ್ರ ಅಕ್ಟೋಬರ್ 13ರಂದು ಗುರುವಾರ ನಗರದ ಸುಚಿತ್ರ ಚಿತ್ರಮಂದಿರದಲ್ಲಿ ತೆರೆಕಂಡಿತು.

barsa-film-inuagration-2

ತುಳು ಚಲನ ಚಿತ್ರದ ನಿರ್ಮಾ¥ಕರÀ ಸಂಘದ ಅಧ್ಯಕ್ಷ ಟಿ.ಎ.ಶ್ರೀನಿವಾಸ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ತುಳುವಿನಲ್ಲಿ ತರೆಕಂಡ 74ನೇ ಸಿನಿಮಾ `ಬರ್ಸ’ ಯಶಸ್ವಿ ಪ್ರದರ್ಶನವನ್ನು ಕಾಣುವಂತಾಗಲಿ, ತುಳು ಸಿನಿಮಾರಂಗ ಬೆಳೆಯುತ್ತಿರುವ ವೇಗವನ್ನು ಕಂಡಾಗ ಖುಷಿಯಾಗುತ್ತದೆ. ತುಳು ಸಿನಿಮಾಗಳು ಉತ್ತಮ ಗುಣಮಟ್ಟದಲ್ಲಿ ತಯಾರಾಗಲಿ ಎಂದು ಅವರು ಶುಭ ಹಾರೈಸಿದರು.

ಜಿ.ಪಂ.ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಚಿತ್ರ ನಿರ್ಮಾಪಕರಾದ ಆರ್.ಧನರಾಜ್, ಕಿಶೋರ್ ಡಿ.ಶೆಟ್ಟಿ , ಪ್ರಕಾಶ್ ಪಾಂಡೇಶ್ವರ್, ರಾಜೇಶ್ ಬ್ರಹ್ಮಾವರ, ಉದ್ಯಮಿಗಳಾದ ಸುರೇಂದ್ರ ಬಂಗೇರ, ರಮೇಶ್ ಬಂಗೇರ, ನಿರ್ಮಾಪಕರಾದ ಶರ್ಮಿಳಾ ದೇವದಾಸ್ ಕಾಪಿಕಾಡ್, ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ ಕಿಣಿ, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಮಾಧವ ಬಗಂಬಿಲ, ಗೀತಾನಂದ ಶೆಟ್ಟಿ, ಚೇತನ್ ರೈ ಮಾಣಿ, ಸಂತೋಷ್ ಶೆಟ್ಟಿ, ಗೋಪಿನಾಥ ಭಟ್, ತಿಮ್ಮಪ್ಪ ಕುಲಾಲ್, ಪಿ.ಎಲ್.ರವಿ, ಸುಜೀತ್ ನಾಯಕ್, ಸಚಿನ್ ಎಎಸ್ ಉಪ್ಪಿನಂಗಡಿ, ಭೋಜರಾಜ ವಾಮಂಜೂರು, ರಾಜೇಶ್ ಕುಡ್ಲ, ನಾಯಕ ನಟ ಅರ್ಜುನ್ ಕಾಪಿಕಾಡ್, ನಟಿ ಕ್ಷಮಾ ಶೆಟ್ಟಿ, ಕಾವ್ಯ ಮೊದಲಾದವರು ಉಪಸ್ಥಿತರಿದ್ದರು. ನಿರ್ದೇಶಕ ದೇವದಾಸ್ ಕಾಪಿಕಾಡ್ ಸ್ವಾಗತಿಸಿದರು. ಅನುರಾಗ್ ಕಾರ್ಯಕ್ರಮ ನಿರ್ವಹಿಸಿದರು. ಬರ್ಸ ಸಿನಿಮಾ ಮಂಗಳೂರಿನಲ್ಲಿ ಸುಚಿತ್ರ, ಬಿಗ್‍ಸಿನೆಮಾಸ್, ಪಿವಿಆರ್, ಸಿನಿಪೆÇಲಿಸ್, ಕಾರ್ಕಳದಲ್ಲಿ ರಾಧಿಕಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಸುಳ್ಯದಲ್ಲಿ ಸಂತೋಷ್, ಸುರತ್ಕಲ್‍ನಲ್ಲಿ ನಟರಾಜ್, ಮಣಿಪಾಲದಲ್ಲಿ ಐನಾಕ್ಸ್ ಚಿತ್ರ ಮಂದಿರದಲ್ಲಿ ತೆರೆಕಂಡಿದೆ.

ಅರ್ಜುನ್‍ಕಾಪಿಕಾಡ್ ನಾಯಕನಟನಾಗಿರುವ ಬರ್ಸ ಸಿನಿಮಾದಲ್ಲಿ ಲವ್ ಸೆಂಟಿಮೆಂಟ್, ಫೈಟ್ ಕ್ವಾಮಿಡಿ ಎಲ್ಲವೂ ಇದೆ. ಕ್ಷಮಾ ಶೆಟ್ಟಿ ನಾಯಕಿಯಾಗಿ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಲಕ್ಷಣ್‍ಕುಮಾರ್ ಮಲ್ಲೂರು, ಸರೋಜಿನಿ ಶೆಟ್ಟಿ ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಸಂತೋಷ್ ಶೆಟ್ಟಿ, ಸತೀಶ್ ಬಂದಲೆ, ತಿಮ್ಮಪ್ಪಕುಲಾಲ್, ಉಮೇಶ್ ಮಿಜಾರ್, ಸುಂದರ್ ರೈ ಮಂದಾರ, ಸುರೇಶ್ ಕುಲಾಲ್, ಮೊದಲಾದವರು ತಾರಾಗಣದಲ್ಲಿದ್ದಾರೆ. ಹಿನ್ನಲೆ ಸಂಗೀತ ಮಣಿಕಾಂತ್ ಕದ್ರಿ, ಪಿ.ಎಲ್.ರವಿ. ಛಾಯಾಗ್ರಹಣ, ಸಾಹಸ:ಮಾಸ್ ಮಾದ ಸಂಕಲನ:ಸುಜಿತ್ ನಾಯಕ್, ಸಚಿನ್ ಎಎಸ್ ಉಪ್ಪಿನಂಗಡಿ ಎಕ್ಸ್‍ಕ್ಯೂಟಿವ್ ಪ್ರೋಡ್ಯೂಸರ್, ನಿರ್ಮಾಣ ನಿರ್ವಹಣೆ ರಾಜೇಶ್ ಕುಡ್ಲ, ಕತೆ, ಚಿತ್ರಕತೆ, ಸಾಹಿತ್ಯ ಸಂಭಾಷಣೆ, ನÀಂದೀತ, ನಿರ್ದೇಶನ ದೇವದಾಸ್ ಕಾಪಿಕಾಡ್, ಶರ್ಮಿಳಾ ಡಿ.ಕಾಪಿಕಾಡ್, ಮುಖೇಶ್ ಹೆಗ್ಡೆ, ಸಪ್ನಾ ಶ್ರೀನಿವಾಸ ಕಿಣಿ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾಕ್ಕಾಗಿ ಬಹುಭಾಷ ಗಾಯಕ ಕಾರ್ತಿಕ್, ದೇವದಾಸ್ ಕಾಪಿಕಾಡ್, ಅರ್ಜುನ್ ಕಾಪಿಕಾಡ್, ರೂಪಾ ಮಹಾದೇವನ್ ಹಾಡಿದ್ದಾರೆ.


Spread the love