ದ್ವಿತೀಯ ಪಿಯು ಟಾಪರ್ ಅಭಿಜ್ಞಾ ಗೆ ಕಾಂಗ್ರೆಸ್ ನಗರಸಭಾ ಸದಸ್ಯರಿಂದ ಸನ್ಮಾನ

Spread the love

ದ್ವಿತೀಯ ಪಿಯು ಟಾಪರ್ ಅಭಿಜ್ಞಾ ಗೆ ಕಾಂಗ್ರೆಸ್ ನಗರಸಭಾ ಸದಸ್ಯರಿಂದ ಸನ್ಮಾನ

ಉಡುಪಿ: ದ್ವಿತೀಯ ಪಿ.ಯು ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿರುವ ಉಡುಪಿ ಜಿಲ್ಲೆಯ ವಿದ್ಯೋದಯ ಪಿ.ಯು ಕಾಲೇಜಿನ ಒಳಕಾಡು ನಿವಾಸಿ ಕುಮಾರಿ ಅಭಿಜ್ಞಾ ರಾವ್ರವರನ್ನು ಗುರುವಾರ ಅವರ ನಿವಾಸದಲ್ಲಿ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ವಿಜಯ ಪೂಜಾರಿ, ಕೆ.ಪಿ.ಸಿ.ಸಿ ಸಂಯೋಜಕರಾದ ವೆರೋನಿಕಾ ಕರ್ನೇಲಿಯೋ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಡಾ. ಸುನೀತಾ ಶೆಟ್ಟಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಂಯೋಜಕರಾದ ರೋಶನಿ ಓಲಿವರ್, ಜ್ಯೋತಿ ಹೆಬ್ಬಾರ್, ಜ್ಯೋತಿ, ಫೌಜಿಯಾ ಸಾದಿಕ್, ರೋಸಲೀನ್, ಶಾಂತಿ ಹಾಗೂ ಸುಧನ್ವ ಶೆಟ್ಟಿ, ಸಂಜಯ್ ಆಚಾರ್ಯ ಉಪಸ್ಥಿತರಿದ್ದರು


Spread the love