ದ.ಕ: ಮೀಲಾದ್ ರಜೆ ಮಂಗಳವಾರ – ಸಚಿವ ಯು.ಟಿ. ಖಾದರ್

Spread the love

ದ.ಕ: ಮೀಲಾದ್ ರಜೆ ಮಂಗಳವಾರ – ಸಚಿವ ಯು.ಟಿ. ಖಾದರ್

ಮಂಗಳೂರು: ಪ್ರವಾದಿ ಮುಹಮ್ಮದ್ ಅವರ‌ ಜನ್ಮ ದಿನ ಮೀಲಾದುನ್ನಬಿ ಆಚರಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್ 20 (ಮಂಗಳವಾರ) ನಡೆಯಲಿರುವುದರಿಂದ ಅಂದು ಜಿಲ್ಲೆಯಲ್ಲಿ ಸರಕಾರಿ ರಜೆ ಘೋಷಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಮೀಲಾದ್ ಸರಕಾರಿ ರಜೆ ನ.21 ರಂದು ನಿಗದಿಯಾಗಿದ್ದರೂ, ದ.ಕ. ಜಿಲ್ಲೆಯಲ್ಲಿ ಮೀಲಾದ್ 20 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ನ. 21 ರ ಸರಕಾರಿ ರಜೆಯನ್ನು ಬದಲಾಯಿಸಿ ನ. 20 ರಂದು ಶಾಲಾ ಕಾಲೇಜುಗಳಿಗೆ, ಸರಕಾರಿ ಕಚೇರಿಗಳಿಗೆ ರಜಾ ದಿನವನ್ನಾಗಿ ಪರಿಗಣಿಸಲು ಹಾಗೂ ನ.21 ರಂದು ಎಂದಿನಂತೆ ಕಾರ್ಯನಿರ್ವಹಿಸಲು ಆದೇಶ ಹೊರಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಸೋಮವಾರ ಈ ಕುರಿತು ಸರಕಾರಿ ಆದೇಶ ಹೊರಡಿಸಲಾಗುವುದು ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.


Spread the love