ಧರ್ಮಸಂಸದ್ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಹಿಂದೂ ಭಾಗವಹಿಸುವಂತೆ ಪ್ರಯತ್ನಿಸಿ ; ಗೋಪಾಲ್ ಜೀ

Spread the love

ಧರ್ಮಸಂಸದ್ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಹಿಂದೂ ಭಾಗವಹಿಸುವಂತೆ ಪ್ರಯತ್ನಿಸಿ ; ಗೋಪಾಲ್ ಜೀ

ಉಡುಪಿ: ಉಡುಪಿ ಮತ್ತು ಮಂಗಳೂರು ಆತಿಥ್ಯ ಮತ್ತು ಸುವ್ಯವಸ್ಥೆಗೆ ಅತ್ಯಂತ ಹೆಸರುವಾಸಿಯಾಗಿರುವುದರಿಂದ, ಉಡುಪಿಗೆ ನ.24ರಿಂದ 26ರವರೆಗೆ ನಡೆಯುವ ಧರ್ಮಸಂಸದ್ ಗೆ ದೇಶದ ಮೂಲೆಮೂಲೆಗಳಿಂದ ಆಗಮಿಸುತ್ತಿರುವ ಸಾಧು ಸಂತರಿಗೆ ಅತ್ಯುತ್ತಮವಾದ ಆತಿಥ್ಯವನ್ನು ನೀಡುವ ಸಮ್ಮೇಳನವನ್ನು ಅತ್ಯಂತ ಸುವ್ಯಸ್ಥಿತವಾದ ರೀತಿಯಲ್ಲಿ ನಡೆಸುವ ಹೊಣೆಯನ್ನು ಉಡುಪಿಯ ಜನಪ್ರತಿನಿಧಿಗಳು ಹೊರಬೇಕು ಎಂದು ವಿಶ್ವಹಿಂದೂ ಪರಿಷತ್ ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜಿ. ಕರೆ ನೀಡಿದ್ದಾರೆ.

ಧರ್ಮಸಂಸದ್ ಗೆ ಪೂರ್ವಭಾವಿಯಾಗಿ ಶನಿವಾರ ಕಾರ್ಯಾಲಯದಲ್ಲಿ ನಡೆದ ಜನಪ್ರತಿನಿಧಿಗಳ ಬೈಠಕ್ ನಲ್ಲಿ ಅವರು ಮಾರ್ಗದರ್ಶನ ನೀಡಿದರು.

ಇದೊಂದು ಐತಿಹಾಸಿಕ ಘಟನೆಯಾಗಿರುವುದರಿಂದ ಪ್ರತಿಯೊಂದು ಮನೆಯಿಂದ ಹಿಂದುಗಳು ಭಾಗವಹಿಸಬೇಕು. ಜನಪ್ರತಿನಿಧಿಗಳು ತಾವು ಪ್ರತಿನಿಧಿಸುವ ಹಿಂದುಗಳೆಲ್ಲರೂ ಜಾತಿ ಮತದ ಬೇಧ ಇಲ್ಲದೇ ಈ ಸಮ್ಮೇಳನಕ್ಕೆ ಆಗಮಿಸುವಂತೆ ಮಾಡುವ ಹೊಣೆಯನ್ನು ಹೊರಬೇಕು ಎಂದವರು ಹೇಳಿದರು.

ಸಮ್ಮೇಳನದ ಅಂಗವಾಗಿ ಹಿಂದೂ ಧರ್ಮದ ಇತಿಹಾಸ, ವರ್ತಮಾನ, ಭವಿಷ್ಯವನ್ನು ಬಿಂಬಿಸುವ ಸುಮಾರು 50 ಲಕ್ಷ ರು. ವೆಚ್ಚದಲ್ಲಿ ಅದ್ಭುತ ಪ್ರದರ್ಶನಿಯನ್ನು ನಡೆಸಲಾಗುತ್ತಿದೆ. ಇದಕ್ಕೆ ತಮ್ಮೂರಿನ ಯುವಜನತೆ, ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಜನಪ್ರತಿನಿಧಿಗಳು ಹೆಚ್ಚಿನ ಪ್ರಯತ್ನ ಮಾಡಬೇಕು, ಬಂದವರೆಲ್ಲರಿಗೂ ಉಚಿತ ಊಟೋಪಚಾರದ ವ್ಯವಸ್ಥೆ ಇದೆ ಎಂದವರು ಹೇಳಿದರು.

ಈ ಸಭೆಯಲ್ಲಿ ವಿಶ್ವ ಹಿಂದು ಪರಿಷದ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಭಾಗವಹಿಸಿದ್ದರು. ನಗರಾಧ್ಯಕ್ಷ ಸಂತೋಷ್ ಸುವರ್ಣ ಬೊಳ್ಜೆ ಕಾರ್ಯಕ್ರಮ ಸಂಯೋಜಿಸಿದರು.

 


Spread the love