ಧರ್ಮಸ್ಥಳದಲ್ಲಿ ವಿಜೃಂಭಣೆಯಿಂದ ನಡೆದ ಕೆರೆಕಟ್ಟೆ ಉತ್ಸವ

Spread the love

ಧರ್ಮಸ್ಥಳದಲ್ಲಿ ವಿಜೃಂಭಣೆಯಿಂದ ನಡೆದ ಕೆರೆಕಟ್ಟೆ ಉತ್ಸವ

ಉಜಿರೆ, ಡಿ.03: ಅಲ್ಲಿಎಲ್ಲೆಲ್ಲೂ ದೀಪಗಳ ಸಾಲು ಹಾಗೂ ಸಡಗರ-ಸಂಭ್ರಮ. ‘ಓಂ ನಮೋಃ ಶಿವಾಯ’ ಮಂತ್ರಘೋಷ. ಧರ್ಮಸ್ಥಳದ ಲಕ್ಷದೀಪೋತ್ಸವದ ಭಾಗವಾಗಿ ನಡೆದಕೆರೆಕಟ್ಟೆಉತ್ಸವ ಆಕರ್ಷಿಸಿದ್ದು ಹೀಗೆ.
ನಂಬಿದ ಭಕ್ತರಕೈಬಿಡದ ಶ್ರೀ ಮಂಜುನಾಥ ಸ್ವಾಮಿಯ ಸಾನಿಧ್ಯದ ಲಕ್ಷದೀಪೋತ್ಸವದ ಪ್ರಯುಕ್ತ ಧರ್ಮಸ್ಥಳದಲ್ಲಿ ಪ್ರತಿ ವರ್ಷವೂದೈವಿಕ ಉತ್ಸವಗಳು ನಡೆಯುತ್ತವೆ. ಆ ಉತ್ಸವಗಳಲ್ಲಿ ಕೆರೆಕಟ್ಟೆಉತ್ಸವವೂಒಂದು.ಧರ್ಮಸ್ಥಳ ಶ್ರೀ ಮಂಜುನಾಥೇಶ್ವರದೇವಾಲಯವುಕಾರ್ತಿಕ ಮಾಸದ ಲಕ್ಷದೀಪೋತ್ಸವದ ಅಂಗವಾಗಿ ಈ ಉತ್ಸವವನ್ನು ನೇರವೇರಿಸಲಾಯಿತು.

ಲಕ್ಷದೀಪೋತ್ಸವದ ಪ್ರಯುಕ್ತ ನಡೆಯುವಈ ಉತ್ಸವವುಒಂದುರೀತಿಯ ದಿವ್ಯಅನುಭವವನ್ನು ಭಕ್ತರಿಗೆ ನೀಡುತ್ತದೆ.ಆರು ದಿನಗಳ ಕಾಲ ನಡೆಯುವಉತ್ಸವದ ಪೂಜೆಒಂದೇರೀತಿಯಾಗಿದ್ದರೂ, ಪಲ್ಲಕ್ಕಿಗಳು ಮಾತ್ರ ಬೇರೆ ಬೇರೆಯಾಗಿರುತ್ತವೆ. ಈ ಕೆರೆಕಟ್ಟೆಉತ್ಸವದಂದುದೇವರ ಮೂರ್ತಿಯನ್ನು ಸ್ವರ್ಣ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ.

ದೇಗುಲದಲ್ಲಿ ಶುರುವಾಗುವ ಮೆರವಣಿಗೆಯುಒಟ್ಟು 16 ಸುತ್ತುಗಳನ್ನು ಒಳಗೊಂಡಿರುತ್ತದೆ. ಆ ಹದಿನಾರು ಸುತ್ತುಗಳಿಗೂ ಒಂದೊಂದು ಹೆಸರಿಡಲಾಗಿರುತ್ತದೆ.ಉಡಿಕೆ ಸುತ್ತು, ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು, ನಾದಸ್ವರ ಸುತ್ತು, ಸರ್ವವಾದ್ಯ ಸುತ್ತು.ಈ ಸುತ್ತುಗಳಲ್ಲಿ ಉಡಿಕೆ ಸುತ್ತುವು 5 ಸುತ್ತುಗಳನ್ನು ಹೊಂದಿದೆ. ಈ ಸುತ್ತುಗಳು ಎಲ್ಲಾಉತ್ಸವಕ್ಕೂಇದ್ದೇಇರುತ್ತವೆ.
ದೇವರ ಸಾನಿಧ್ಯದಲ್ಲಿಉತ್ಸವ ಶುರುವಾಗುವ ಮುನ್ನದೇಗುಲದ ಹೊರಭಾಗದಿಂದ ಮೊದಲು ಶುದ್ಧಿ ಮಾಡಿದ ನಂತರದೇವಸ್ಥಾನದ ಒಳಭಾಗದಲ್ಲಿ ಮೆರವಣಿಗೆಆರಂಭವಾಗುತ್ತದೆ.ಉತ್ಸವದ ಮೆರವಣಿಗೆ ಶುರುವಾದ ಪ್ರತೀ ಸುತ್ತಿನಲ್ಲಿಯೂಬಲಿ ಕಲ್ಲಿಗೆಶುದ್ಧಿ ಮಾಡಲಾಗುತ್ತದೆ.

ಉಡಿಕೆ ಸುತ್ತು 5 ಸುತ್ತುಆದ ನಂತರ, ಕ್ಷೇತ್ರ ಫಲನಿಗೆ ಪೂಜೆ ಸಲ್ಲಿಸಿ ಮಂಜುನಾಥ ಸ್ವಾಮಿಯನ್ನು ಸರ್ವ ಪಲ್ಲಕ್ಕಿಯಲ್ಲಿಕೂರಿಸಲಾಯಿತು.ಪಲ್ಲಕ್ಕಿಯಲ್ಲಿಒಟ್ಟು 11 ಸುತ್ತುಗಳನ್ನು ಸುತ್ತಿದ ನಂತರ, ದೇವಾಲಯದ ಮುಂಭಾಗದಿಂದವಿಜೃಂಭಣೆ ಮೆರವಣಿಗೆಯಿಂದಪ್ರಾರಂಭವಾಯಿತು.ಈ ಮೆರವಣಿಗೆಯಲ್ಲಿಒಂದೆಡೆ ದೇವಳದ ಆನೆ ಸ್ವಾಮಿಗೆಚಾಮರ ಬೀಸಿ ಸ್ವಾಗತಿಸಿದರೆ, ಇನ್ನೊಂದೆಡೆದೇವಾಲಯದರಾಮ ಎಂಬ ಹಸುವು ಸ್ವಾಮಿಯನ್ನು ಸ್ವಾಗತ್ತಿಸುತ್ತಾರಾಜಾಗಾಂಭೀರ್ಯದಿಂದ ಹಜ್ಜೆಯಿರಿಸಿತು.

ಈ ಮೆರವಣಿಗೆಯಲ್ಲಿ ಸ್ವಾಮಿಯಎರಡೂ ಬದಿಗಳಲ್ಲಿ ಉದ್ದನೆಯ ಬೆಂಕಿಯ ಪಂಜುಗಳನ್ನು ಹಿಡಿದಿರುತ್ತಾರೆ.ಈ ಮೂಲಕ ಮಂಜುನಾಥ ಸ್ವಾಮಿಯನ್ನು ಹೊಳಪಿನ ಬೆಳಕಿನಲ್ಲಿ ನೋಡುವ ಭಾಗ್ಯ ಭಕ್ತರಿಗೆ ಲಭಿಸಿತು.ದೇವರ ಪೂಜಾಕಾರ್ಯಗಳ ನಡುವೆ ಕೇಳಿಬರುತ್ತಿದ್ದ ವಿವಿಧ ವಾದ್ಯಗಳ ನಿನಾದ ಭಕ್ತಸಮೂಹಕ್ಕೆ ಖುಷಿ ನೀಡುತ್ತಿತ್ತು.
ಕೆರೆಕಟ್ಟೆಉತ್ಸವವುಕ್ಷೇತ್ರದಕೆರೆಯಮುಂಭಾಗದಕಟ್ಟೆಯಲ್ಲಿ ನೇರವೇರಿತು.ಕಟ್ಟೆಗೆ ಹೋಗುವ ಮುನ್ನ, ಉತ್ಸವದ ಮೆರವಣಿಗೆಯೂ ಮೊದಲುಕೆರೆಯನ್ನು ಪ್ರವೇಶಿಸಿತು.ಪ್ರವೇಶಿಸಿ ಒಟ್ಟು 5 ಸುತ್ತುಗಳನ್ನು ಸುತ್ತಿ, ನಂತರಕಟ್ಟೆಕಡೆ ಮೆರವಣಿಗೆ ಸಾಗಿತು.ಆ ಕಟ್ಟೆಯಲ್ಲಿ ಸುಮಾರು 30 ನಿಮಿಷಗಳ ಪೂಜೆಯನ್ನು ಸ್ವಾಮಿಗೆ ಸಲ್ಲಿಸಲಾಯಿತು.ಪೂಜೆ ಸಲ್ಲಿಸಿ ಪುನಃ ದೇವರ ಮೆರವಣಿಗೆದೇವಾಲಯದ ಹತ್ತಿರ ಹೆಜ್ಜೆ ಹಾಕಿತು.

ವರದಿ: ರೂಪಿಣಿ ಎಂ. ಬಿ
ಚಿತ್ರ: ಅಭಿನಂದನ್‍ಜೈನ್


Spread the love