ಬಾಬರಿ ಮಸೀದಿಯ ದ್ವಂಸ ಸಂವಿಧಾನದ ನಾಶ – ಇಲ್ಯಾಸ್ ಮುಹಮ್ಮದ್ ತುಂಬೆ

Spread the love

ಬಾಬರಿ ಮಸೀದಿಯ ದ್ವಂಸ ಸಂವಿಧಾನದ ನಾಶ – ಇಲ್ಯಾಸ್ ಮುಹಮ್ಮದ್ ತುಂಬೆ

ಮಂಗಳೂರು: ‘ಬಾಬರಿ ಮಸ್ಜಿದ್ ಮರಳಿ ಪಡೆಯೋಣ, ಭಾರತವನ್ನು ಮರಳಿ ಗಳಿಸೋಣ’ ಎಂಬ ಘೋಷಣೆಯೊಂದಿಗೆ ಬಾಬರಿ ಮಸ್ಜಿದ್ ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ಎಸ್ಡಿಪಿಐ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಮಂಗಳವಾರ ನಗರದ ಹಂಪನಕಟ್ಟೆಯಿಂದ ರ್ಯಾಲಿ ಹಾಗೂ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಹಕ್ಕೊತ್ತಾಯ ಸಭೆ ನಡೆಯಿತು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ 1992ರ ಡಿಸೆಂಬರ್ 6, ಇಂಡಿಯಾದಇತಿಹಾಸದ ಪುಟಗಳಲ್ಲಿ ಎಂದು ಮರೆಯಲಾಗದ ಅವಮಾನ, ಕ್ರೌರ್ಯ ಮತ್ತು ವಿನಾಶಕ್ಕೆ ಸಾಕ್ಷಿಯಾದ ದಿನವಾಗಿರುತ್ತದೆ. ಆ ದಿನ ಆರ್.ಎಸ್.ಎಸ್ನ ಫ್ಯಾಶಿಸ್ಟ್ ಗುಂಪುಗಳು ಬಾಬ್ರಿ ಮಸೀದಿಯನ್ನು ಧ್ವಂಸಮಾಡಿತು.ಈ ಘಟನೆಯುಜಾತ್ಯತೀತ, ಪ್ರಜಾಪ್ರಭುತ್ವರಾಷ್ಟ್ರವಾದ ಭಾರತಕ್ಕೆಇಡೀಜಗತ್ತಿನ ಮುಂದೆ ನಾಚಿಕೆ ಮತ್ತುಅವಮಾನದಿಂದತಲೆತಗ್ಗಿಸುವಂತೆ ಮಾಡಲಾಯಿತು.ಸಂಘ ಪರಿವಾರದವರು ನಡೆಸಿದ ರಥಯಾತ್ರೆಯಿಂದಾಗಿ ಮತ್ತು ಬಾಬ್ರಿ ಮಸೀದಿಯ ಧ್ವಂಸದ ನಂತರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಸಾವಿರಾರುಅಮಾಯಕ ಭಾರತೀಯರುಕ್ರೂರವಾಗಿಕೊಲ್ಲಲ್ಪಟ್ಟರು.ಈ ಭೀಕರಘಟನೆಯಿಂದಾಗಿ ಭಾರತೀಯ ಸಮಾಜದಲ್ಲಿ ಭದ್ರವಾಗಿ ನೆಲಯೂರಿದ್ದ ಕೋಮು ಸಾಮರಸ್ಯ, ಸಹಬಾಳ್ವೆ ಮತ್ತುಅನ್ಯೋನ್ಯತೆಯ ಮೇಲೆ ದೊಡ್ಡ ಹೊಡೆತ ಬಿದ್ದಿತು.ಶತಮಾನಗಳಿಂದ ಒಂದೇಕುಟುಂಬದಂತೆ ವಾಸಿಸುತ್ತಿದ್ದ ಸಮುದಾಯಗಳ ಮಧ್ಯೆ ಅಪನಂಬಿಕೆ ಮತ್ತುದ್ವೇಷದ ಹೊಗೆಯಾಡಲಾರಂಭಿಸಿದವು ಹಾಗೂ ಪರಸ್ಪರ ಸಹೋದರ ಸಂಬಂಧಗಳು ಮುರಿದು ಬಿದ್ದವು.ಪ್ರಜಾಪ್ರಭುತ್ವ ವಿರೋಧಿ ಪಡೆಗಳು ಸಮಾಜದಲ್ಲಿಒಂದು ಸ್ಪಷ್ಠವಾದ ಕೋಮು ವಿಭಜನೆಯು ಸ್ಥಾಪಿಸಲ್ಪಟ್ಟವು.ಆರ್.ಎಸ್.ಎಸ್ನ ಫ್ಯಾಶಿಸ್ಟ್ ಅಜೆಂಡದೊಂದಿಗೆ ಬಿ.ಜೆ.ಪಿಯಕೋಮುವಾದದ ರಾಜಕೀಯಅಧಿಕಾರದಾಹಕ್ಕಾಗಿ ನಮ್ಮರಾಷ್ಟ್ರವು ಭಾರೀ ಬೆಲೆ ತೆರೆಬೇಕಾಯಿತು.ಬಾಬ್ರಿ ಮಸೀದಿ ಧ್ವಂಸದಗಾಯವು ಇಂದಿಗೂ ಭಾರತೀಯ ನಾಗರೀಕರ ಹೃದಯದಲ್ಲಿ ಮಾಯವಾಗದೆ ಉಳಿದಿರುತ್ತದೆ.ನಮ್ಮದೇಶದಜಾತ್ಯತೀತಚೌಕಟ್ಟನ್ನು ನಾಶಮಾಡಿದ ಈ ಭೀಕರಧ್ವಂಸ ಪ್ರಕರಣವು ಪ್ರಜಾಪ್ರಭುತ್ವ ವ್ಯವಸ್ಥೆಯ ಹೃದಯ ಭಾಗಕ್ಕೆ ಮುಳ್ಳಿನಿಂದ ಚುಚ್ಚಿದ ನೋವಿನ ಅನುಭವವನ್ನು ಇಂದಿಗೂ ನೀಡುತ್ತಿದೆಇದೆಲ್ಲಾವೂ ಸಂವಿಧಾನದ ನಾಶವಾಗಿದೆ.

ಅಂದಿನ ಪ್ರಧಾನಿಯವರುಅದೇ ಸ್ಥಳದಲ್ಲಿ ಬಾಬ್ರಿ ಮಸೀದಿಯನ್ನು ಪುನರ್ ನಿರ್ಮಿಸಲಾಗುವುದು ಎಂಬ ಭರವಸೆಯನ್ನುರಾಷ್ಟ್ರಕ್ಕೆ ನೀಡಿದ್ದರು.ಈ ವಿನಾಶದ ಕಾರಣಗಳನ್ನು ಪತ್ತೆಹಚ್ಚಲು ನೇಮಕಗೊಂಡಿದ್ದ ಲಿಬರ್ಹಾನ್ಆಯೋಗವು 19 ವರ್ಷಗಳ ನಂತರÀತನ್ನ ವರದಿಯಲ್ಲಿ 68 ಅಪರಾಧಿಗಳನ್ನು ಹೆಸರಿಸಿತು.ಆದರೆ 26 ವರ್ಷಗಳ ನಂತರ ಇಂದಿಗೂ ಕೂಡಾ ನಮ್ಮನ್ನು ಆಳಿದ ಮತ್ತು ಆಳುತ್ತಿರುವ ಸರ್ಕಾರಗಳು ಬಾಬ್ರಿ ಮಸೀದಿಯನ್ನು ಪುನರ್ ನಿರ್ಮಿಸುವ ಮತ್ತು ಆ 68 ಅಪರಾಧಿಗಳನ್ನು ಶಿಕ್ಷಿಸುವ ಭರವಸೆಗಳನ್ನು ಈಡೇರಿಸಿರುವುದಿಲ್ಲ. ಬದಲಿಗೆಅವರನ್ನುಉನ್ನತ ಮಟ್ಟದ ಸ್ಥಾನಮಾನ ಹಾಗೂ ಸಂಪುಟದರ್ಜೆಯ ಸಚಿವ ಸ್ಥಾನಗಳನ್ನು ನೀಡಿಗೌರವಿಸಲಾಯಿತು. ಈ ಎಲ್ಲಾ ವರ್ಷಗಳಲ್ಲಿ ಜಾತ್ಯಾತೀತ ಪ್ರಿಯ ನಾಗರಿಕರುಅಪಾರವಾದ ಮಾನಸಿಕ ಯಾತನೆಗೆ ಒಳಗಾಗುತ್ತಿದ್ದಾರೆ.

ಮುಸಲ್ಮಾನರುತಮ್ಮಐತಿಹಾಸಿಕ ಸ್ಮಾರಕವನ್ನು ನಷ್ಟ ಹೊಂದುದರೊಂದಿಗೆಎರಡುವರೆ ದಶಕಗಳಿಂದ ಅನುಭವಿಸುತ್ತಿರುವಅನ್ಯಾಯ ಮತ್ತುಅಸಹನೀಯವಾದ ನೋವನ್ನುತನ್ನ ಭಾರವಾದ ಹೃದಯದಿಂದ ಸಹಿಸಿಕೊಳ್ಳುತ್ತಿದ್ದಾರೆ. ಬಾಬ್ರಿ ಮಸೀದಿ ಧ್ವಂಸದ ನಂತರ ಕೋಮುವಾದಿ ಆರ್.ಎಸ್.ಎಸ್ ಮತ್ತುಅದರ ಗುಂಪುಗಳು ಕೋಮು ದ್ರುವೀಕರಣ, ಹಿಂಸೆ, ದ್ವೇಷವನ್ನು ಹಬ್ಬುವ ಮೂಲಕ ಧರ್ಮದಆಧಾರದಲ್ಲಿ ಸಮಾಜವನ್ನು ವಿಭಜಿಸುವತನ್ನಕಾರ್ಯಸೂಚಿಯನ್ನು ತೀವ್ರಗೊಳಿಸುವುದರೊಂದಿಗೆ ಹಿಂದು, ಮುಸ್ಲಿಂ, ದಲಿತರು ಮತ್ತು ಆದಿವಾಸಿಗಳನ್ನು ಬಲಿಪಾಶುಗಳನ್ನಾಗಿಸುತ್ತಿದೆ. ಬಾಬ್ರಿ ಮಸೀದಿಯ ಪುನರ್ ನಿರ್ಮಾಣ ಮತ್ತು ಸ್ಮಾರಕ ಧ್ವಂಸಗೊಳಿಸಿದ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವವರೆಗೆ ಈ ದೇಶದಜಾತ್ಯಾತೀತತೆಯ ಮರುಸ್ಥಾಪನೆ ಸಾಧ್ಯವಿರುವುದಿಲ್ಲ ಎಂಬುದು ಸ್ಪಟಿಕದಷ್ಟೇ ಸ್ಪಷ್ಟವಾಗಿರುವ ಸತ್ಯವಾಗಿರುತ್ತದೆ.ಬಾಬ್ರಿ ಮಸೀದಿಗೆ ನ್ಯಾಯ ಸಿಗುವ ವರೆಗೂ ಈ ದೇಶದಎಲ್ಲಾಜಾತ್ಯಾತೀತಜನತೆಯುತಮ್ಮ ಹೋರಾಟವನ್ನು ನಿರಂತರಗೊಳಿಸಬೇಕಾಗಿರುತ್ತದೆ. ಹಾಗೂ ಎಲ್ಲಾ ಭಾರತೀಯ ಪ್ರಜೆಗಳು ಬಾಬ್ರಿ ಮಸೀದಿಯ ಪುನರ್ ನಿರ್ಮಾಣಕ್ಕಾಗಿಎಲ್ಲಾರೀತಿಯ ಪಟ್ಟು ಬಿಡದ ಹೋರಾಟವನ್ನು ಮುಂದುವರಿಸಬೇಕಾಗುತ್ತದೆ.


Spread the love