ಧರ್ಮಸ್ಥಳ: ಅಶೋಕ್ ಸಿಂಘಾಲ್ ನಿಧನಕ್ಕೆ ಡಾ. ಹೆಗ್ಗಡೆ ಸಂತಾಪ

Spread the love

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಶೋಕ್ ಸಿಂಘಾಲ್ ನಿಧನದ ಬಗ್ಗೆ ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ. ಅವರೊಬ್ಬ ಅಪ್ರತಿಮ ದೇಶ ಭಕ್ತ. ಶಾಂತಮೂರ್ತಿ. ಸ್ಪಷ್ಟವಾದ ನಿಲುವು, ಸ್ಪಷ್ಟವಾದ ಮಾತು ಮತ್ತು ಸ್ಪಷ್ಟವಾದ ಧೋರಣೆ ಅವರ ಶಕ್ತಿಯಾಗಿತ್ತು. ಅವರ ನಿಧನದಿಂದ ರಾಷ್ಟ್ರಮಟ್ಟದ ಒಬ್ಬ ದಕ್ಷ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಅನೇಕ ಸಂದರ್ಭಗಳಲ್ಲಿ ಅವರೊಂದಿಗೆ ಜೊತೆಯಾಗಿ ಮಾತನಾಡುವ ಅವಕಾಶ ತನಗೆ ದೊರಕಿತ್ತು. ಎಲ್ಲಾ ಸಂದರ್ಭಗಳಲ್ಲಿ ಮಾತಾಡುವಾಗಲೂ ಹಿಂದೂ ಧರ್ಮದ ರಕ್ಷಣೆ ಹಿಂದೂ ಸಮಾಜದ ಸಂಘಟನೆ ಮತ್ತು ಭವಿಷ್ಯದಲ್ಲಿ ಹಿಂದೂ ಧರ್ಮದ ಬೆಳವಣಿಗೆ ಬಗ್ಯೆ ವಿಶೇಷ ಕಾಳಜಿಯಿಂದ ಅವರು ಮಾತನಾಡುತ್ತಿದ್ದರು ಎಂದು ಹೆಗ್ಗಡೆಯವರು ಸ್ಮರಿಸಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ..


Spread the love