ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ; ನಟ ಪ್ರಥಮ್ ವಿರುದ್ದ ಪ್ರಕರಣ ದಾಖಲು

Spread the love

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ; ನಟ ಪ್ರಥಮ್ ವಿರುದ್ದ ಪ್ರಕರಣ ದಾಖಲು

ಬೆಂಗಳೂರು: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಆರೋಪದ ಮೇಲೆ ಸಂಘಟನೆಯೊಂದರ ನಾಯಕರು ನೀಡಿದ ದೂರಿನಂತೆ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ನಟ ಪ್ರಥಮ್ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.

ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಘಟನೆಯೊಂದ ಕಾರ್ಯಕರ್ತ ಉಮರ್ ಫಾರೂಕ್ ಎಂಬುವರು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಉಮರ್ ಫಾರೂಕ್ ಅವರ ದೂರನ್ನು ಆಧರಿಸಿ, ಇದೀಗ ನಟ ಪ್ರಥಮ್ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.


Spread the love