ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗೋ ಪೂಜೆ

ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗೋ ಪೂಜೆ

ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಕದ್ರಿ ಅಳ್ವಾರೀಸ್ ರಸ್ತೆಯಲ್ಲಿರುವ ದುರ್ಗಾ ಮಹಲ್ ನಲ್ಲಿ ಗೋ ಪೂಜೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶಾಂತಲಾ ಗಟ್ಟಿಯವರು ದೀಪಾವಳಿಯ ವಿಶೇಷತೆ ಹಾಗೂ ಗೋ ಪೂಜೆಯ ಮಹತ್ವವನ್ನು ತಿಳಿಸಿದರು.

ಈ ಗೋ ಪೂಜೆಯನ್ನು ಮಾಜಿ ಶಾಸಕರಾದ ಶ್ರೀ ಜೆ. ಆರ್. ಲೋಬೊ ರವರ ಮಾರ್ಗದರ್ಶನದ ಮೇರೆಗೆ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ದಾಸ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಮಿತಾ ಡಿ ರಾವ್, ಮಹಾನಗರ ಪಾಲಿಕೆ ಜನಪ್ರತಿನಿಧಿಗಳಾದ ಅಖಿಲಾ ಆಳ್ವ, ಆಶಾ ಡಿ. ಸಿಲ್ವ, ಅಪ್ಪಿ, ಸರಳಾ ಕರ್ಕೆರಾ, ಮರಿಯಮ್ಮ ಥೋಮಸ್ ಹಾಗೂ ಪದಾಧಿಕಾರಿಗಳಾದ ಮೋಹನಾಂಗಯ್ಯ, ನೇತ್ರಾವತಿ, ಮಮತಾ ಶೆಟ್ಟಿ, ಮಮತಾ ಹೆಚ್ ಶೆಟ್ಟಿ, ನಂದಿನಿ, ಕೆ. ರಮಣಿ, ಉಮೇಶ್, ಮೋಹನ್ ಆರ್ ಅಮೀನ್, ವೀರಲಕ್ಷ್ಮೀ, ಬಬಿತಾ ಮೋಹನ್, ಅನಿತಾ, ಭಾರತಿ, ರಾಜೇಶ್ವರಿ, ರೂಪ, ಚೇತನ್ ಮೀನಾ, ರಘುರಾಜ್ ಕದ್ರಿ, ಚೇತನ್ ಕುಮಾರ್, ಟಿ. ಸಿ. ಗಣೇಶ್, ಸುರೇಶ್ ಕದ್ರಿ, ಗೀತಾ ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು