ನಮ್ಮ ತುಳುನಾಡ್ ಟ್ರಸ್ಟ್ ಶುಭಾಶಯ ಯೂಟ್ಯೂಬ್ ವೀಡಿಯೋ ಲೋಕಾರ್ಪಣೆ

Spread the love

ನಮ್ಮ ತುಳುನಾಡ್ ಟ್ರಸ್ಟ್ ಶುಭಾಶಯ ಯೂಟ್ಯೂಬ್ ವೀಡಿಯೋ ಲೋಕಾರ್ಪಣೆ

ಮಂಗಳೂರು: ನಮ್ಮ ತುಳುನಾಡ್ ಟ್ರಸ್ಟ್ (ರಿ.) ಮಂಗಳೂರು ಇದರ ಆಶ್ರಯದಲ್ಲಿ ಸಮಗ್ರ ತುಳುನಾಡ್ ಸಂಶೋಧನಾ ಗ್ರಂಥ ಹಾಗೂ ವೀಡಿಯೋ ದಾಖಲೀಕರಣ ಯೋಜನೆಯ ಅಂಗವಾಗಿ ತುಳುನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮತ್ತು ಸೇವೆ ಮಾಡಿರುವ ಮಹನಿಯರುಗಳನ್ನು ಸಂದರ್ಶನ ಮಾಡಿ ಸಾಕ್ಷ್ಯ ಚಿತ್ರಿಕರಣ ಯೋಜನೆಯನ್ನು ಪ್ರಾರಂಭವಾಗಿದ್ದು ಪ್ರಥಮ ಹಂತದಲ್ಲಿ ಪರಮ ಪೂಜ್ಯರ ಹಾಗೂ ಗಣ್ಯಾತಿ ಗಣ್ಯರ ಶುಭ ಸಂದೇಶಗಳ ಯೂಟ್ಯೂಬ್ ವೀಡಿಯೋ ಬಿಡುಗಡೆಯನ್ನು 2020 ಆಗಸ್ಟ್ 14ನೇ ತಾರೀಕಿನಂದು ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿಯಲ್ಲಿ ನಮ್ಮ ತುಳುನಾಡ್ ಟ್ರಸ್ಟ್ ಅಂತರಾಷ್ಟ್ರೀಯ ಘಟಕದ ಅಧ್ಯಕ್ಷರಾದ  ಸರ್ವೋತ್ತಮ ಶೆಟ್ಟಿಯವರು ಲೋಕಾರ್ಪಣೆ ಗೊಳಿಸಿದರು.

ಪ್ರಸ್ತುತ ಅನೀರಿಕ್ಷಿತ ಮಹಾಮಾರಿ ಕೊರೋನಾ, ಕೋವಿಡ್-19 ನ ಲಾಕ್ ಡೌನ್ ನ ಪರಿಣಾಮವಾಗಿ ಸಾರ್ವಜನಿಕ ಸಭೆ ಸಮಾರಂಭವನ್ನು ನಡೆಸಲು ಸಾಧ್ಯವಾಗದ ಕಾರಣ ಸಾಮಾಜಿಕ ಜಾಲತಾಣದ ಮೂಲಕ ಲೋಕಾರ್ಪಣೆ ಗೊಳಿಸಿದ ಶ್ರೀ ಸರ್ವೋತ್ತಮ ಶೆಟ್ಟಿಯವರು ಸಮಗ್ರ ತುಳುನಾಡಿನ ದಾಖಲಿಕರಣ ಯೋಜನೆಗೆ ಶುಭಾಶಯಗಳನ್ನು ಕೋರಿ ವಿಶ್ವದಾಧ್ಯಂತ ನೆಲೆಸಿರುವ ಸಮಗ್ರ ತುಳುವರು ನಮ್ಮ ತುಳುನಾಡ್ ಟ್ರಸ್ಟ್ ನ ದಾಖಲಿಕರಣದ ಬೃಹತ್ ಯೋಜನೆಗೆ ಸಹಕಾರ ಬೆಂಬಲ ಮತ್ತು ಪ್ರೋತ್ಸಾಹ ನೀಡಿ ಯಶಸ್ಚಿಗೊಳಿಸಬೇಕೆಂದು ತಮ್ಮ ಸಂದೇಶದಲ್ಲಿ ತಿಳಿಸಿದರು.

ಮುಂಬರುವ ದಿನಗಳಲ್ಲಿ ಪರಿಸ್ಥಿಯನ್ನು ನೋಡಿಕೊಂಡು ತುಳುನಾಡಿನಲ್ಲಿ ಮತ್ತು ವಿದೇಶಗಳಲ್ಲಿ ದಾಖಲಿಕರಣ ಯೋಜನೆಯನ್ನು ಮುಂದುವರಿಸಲಾಗುವುದೆಂದು ನಮ್ಮ ತುಳುನಾಡ್ ಟ್ರಸ್ಟ್ ಮಂಗಳೂರು ಇದರ ಗೌರವ ಅಧ್ಯಕ್ಷರು ಶ್ರೀ ಬಿ. ಕೆ. ಗಣೇಶ್ ರೈಯವರು ಮಾಧ್ಯಮ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.


Spread the love