ನಾಟೆಕಲ್ ನಲ್ಲಿ ಭೀಕರ ಅಪಘಾತ, ಗಾಯಾಳು ಯುವಕನೂ ಮೃತ್ಯು!

Spread the love

ನಾಟೆಕಲ್ ನಲ್ಲಿ ಭೀಕರ ಅಪಘಾತ, ಗಾಯಾಳು ಯುವಕನೂ ಮೃತ್ಯು!

ಉಳ್ಳಾಲ: ಮಂಜನಾಡಿ ನಾಟೆಕಲ್ ಸಮೀಪ ನಿನ್ನೆ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹಿಂಬದಿ ಸವಾರಳಾಗಿದ್ದ ಹಳೆಯಂಗಡಿ ತೋಕೂರು ಬಳಿಯ ನಿವಾಸಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಚಲಾಯಿಸುತ್ತಿದ್ದ ಯುವಕ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಬೋಂದೇಲ್ ನಿವಾಸಿ ದೀಕ್ಷಿತ್ ಎಂಬವರ ಪತ್ನಿ ಹಳೆಯಂಗಡಿ ತೋಕೂರು ಬಸ್ ನಿಲ್ದಾಣ ಬಳಿಯ ನಿವಾಸಿ ಶ್ರೀ ನಿಧಿ (29) ನಿನ್ನೆ ಸಾವನ್ನಪ್ಪಿದ್ದು ಬೈಕ್ ಚಲಾಯಿಸುತ್ತಿದ್ದ ಯತೀಶ್ ದೇವಾಡಿಗ ಗಂಭೀರ ಗಾಯಗೊಂಡಿದ್ದರು. ಅತೀವೇಗದಿಂದ ಬೈಕ್ ನಿಯಂತ್ರಣ ತಪ್ಪಿ ನಾಟೆಕಲ್ ಗ್ರೀನ್ ಗ್ರೌಂಡ್ ಸಮೀಪ ಡಿವೈಡರ್ ಗೆ ಬಡಿದು ಅಪಘಾತ ಸಂಭವಿಸಿತ್ತು. ನಿಧಿಗೆ ಇಬ್ಬರು ಪುಟಾಣಿ ಮಕ್ಕಳಿದ್ದು ತೋಕೂರಿನ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಯತೀಶ್ ದೇವಾಡಿಗ ಪೋಷಕರಿಗೆ ಒಬ್ಬನೇ ಪುತ್ರನಾಗಿದ್ದಾರೆ.


Spread the love

Leave a Reply