ನಾಪತ್ತೆಯಾಗಿದ್ದ ಯುವತಿ ಅಸ್ಸಾಂ ನಲ್ಲಿ ಪತ್ತೆ

Spread the love

ನಾಪತ್ತೆಯಾಗಿದ್ದ ಯುವತಿ ಅಸ್ಸಾಂ ನಲ್ಲಿ ಪತ್ತೆ

ಮಂಗಳೂರು: ನಾಪತ್ತೆಯಾಗಿದ್ದ ಯುವತಿಯೋರ್ವಳನ್ನು  ಪುತ್ತೂರು ಪೊಲೀಸರು ಅಸ್ಸಾಂನಲ್ಲಿ ಪತ್ತೆ ಹಚ್ಚಿ ಮಾರ್ಚ್ 22 ರಂದು ವಾಪಾಸು ಕರೆತಂದಿದ್ದಾರೆ.

ನಾಪತ್ತೆಯಾದ ಯುವತಿಯನ್ನು ಪುತ್ತೂರು ಪಿದಪಟ್ಲ ಭಾಸ್ಕರ ಪೂಜಾರಿರವರ ಪುತ್ರಿ ಕು.ಹೃತಿಕಾ (17) ಎಂದು ಗುರುತಿಸಲಾಗಿದೆ.

ಪುತ್ತೂರು ತಾಲೂಕು, ಕೆದಂಬಾಡಿ ಗ್ರಾಮ ಪಂಚಾಯತ್ ಕಟ್ಟಾತ್ತಾರು ಬಳಿಯಿರುವ ಪಿದಪಟ್ಲ ವಾಸಿಯಾದ ಭಾಸ್ಕರ ಪೂಜಾರಿರವರ ಪುತ್ರಿ ಕು.ಹೃತಿಕಾ (17).08.03.2019  ರಂದು ನಾಪತ್ತೆಯಾಗಿದ್ದು ಸದ್ರಿ ವಿಷಯಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಕೈಗೊಂಡ ಪುತ್ತೂರು ಗ್ರಾಮಾಂತರ ಠಾಣಾ ಠಾಣಾಧಿಕಾರಿಗಳಾದ ಪ್ರೊ.ಡಿವೈಎಸ್ ಪಿ ಶಿವಾನಂದ ಮದರಕಂಡಿರವರ ಮಾರ್ಗದರ್ಶನದಲ್ಲಿ ಪಿಎಸ್ ಐ ಸಕ್ತಿವೇಲುರವರು ಹಾಗೂ ಇತರ ಸಿಬ್ಬಂದಿಯವರು ಬಾಲಕಿಯು ಅಸ್ಸಾಂನಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಅಸ್ಸಾಂಗೆ ತೆರಳಿ ಬಾಲಕಿಯನ್ನು  22.03.2019 ರಂದು ಠಾಣೆಗೆ ಕರೆ ತಂದಿರುತ್ತಾರೆ.

ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.


Spread the love