ನಾಲ್ಕು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Spread the love

ನಾಲ್ಕು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮಂಗಳೂರು: ನಾಲ್ಕು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಾಸರಗೋಡು ಪೈವಳಿಕೆ ನಿವಾಸಿ ಅಬ್ದುಲ್ ಸಲಾಂ (26) ಎಂದು ಗುರುತಿಸಲಾಗಿದೆ.
ಕೊಣಾಜೆ ಪೊಲೀಸ್ ಠಾಣಾ ವಾರೆಂಟ್ ಅಸಾಮಿಯಾದ ಅಬ್ದುಲ್ ಸಲಾಂ ಎಂಬಾತನ ವಿರುದ್ದ ಕೊಣಾಜೆ ಠಾಣೆಯಲ್ಲಿ ಠಾಣಾ ಅಕ್ರ 39/2018 ಕಲಂ: 379, 392, 397, 411, 414 ಐಪಿಸಿ ಮತ್ತು ಕೊಣಾಜೆ ಪೊಲೀಸ್ ಠಾಣಾ ಅಕ್ರ: 68/2018 ಕಲಂ: 379 ಮತ್ತು 4, 5, 7, 8, 9, 11,12 ಗೋ ಹತ್ಯೆ ನಿಷೇದ ಕಾಯ್ದೆಯಂತೆ ಪ್ರಕರಣಗಳು ದಾಖಲಾಗಿದ್ದು, ಈತನು ಸುಮಾರು 4 ವರ್ಷದಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು

ಸೋಮವಾರ ಉಳ್ಳಾಲ ತಾಲೂಕು ನಾಟೆಕಲ್ ಎಂಬಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್(ಐ.ಪಿ.ಎಸ್) ರವರ ನಿರ್ದೇಶನದಂತೆ, ಉಪ ಪೊಲೀಸ್ ಆಯುಕ್ತರುಗಳಾದ ಸಿದ್ದಾರ್ಥ ಗೋಯಲ್, ದಿನೇಶ್ ಕುಮಾರ್ ರವರ ಮಾರ್ಗದರ್ಶನ ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ ಎನ್ ನಾಯಕ ಮತ್ತು ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರವೀಂದ್ರ ಸಿ ಮುಂದಾಳತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ನಾಗರಾಜ್ ಎಸ್, ಪುನೀತ್ ಗಾಂವಕಾರ್ ಸಿಬ್ಬಂದಿಗಳಾದ ಹೆಚ್.ಸಿ 323 ಮಹಮ್ಮದ್ ಶರೀಫ್, ಪಿಸಿ 765 ಸಂತೋಷ, ಪಿಸಿ 3204 ಸುರೇಶ, ಪಿಸಿ 2439 ಬಸವನಗೌಡ ರವರ ತಂಡ ವಾರಂಟ್ ಆಸಾಮಿ ಅಬ್ದುಲ್ ಸಲಾಂ@ತುಡುವ ಸಲಾಂನ ಪತ್ತೆ ಮಾಡಿ ದಸ್ತಗಿರಿಗೆ ಒಳಪಡಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.


Spread the love