ನಿರಂತರ ದಂತ ಶಾಸ್ತ್ರ ಕಲಿಕಾ ಕಾರ್ಯಕ್ರಮ

Spread the love

ನಿರಂತರ ದಂತ ಶಾಸ್ತ್ರ ಕಲಿಕಾ ಕಾರ್ಯಕ್ರಮ

ಮಂಗಳೂರಿನ ಏ. ಜೆ. ದಂತ ವೈದ್ಯಕೀಯ ಕಾಲೇಜಿನ, ಓರಲ್ ಅಂಡ್ ಮ್ಯಾಕ್ಸಿಲ್ಲೋ ಫೇಷಿಯಲ್ ಸರ್ಜರಿ ವಿಭಾಗದ ವತಿಯಿಂದ ನಿರಂತರ ದಂತ ಶಾಸ್ತ್ರ ಕಲಿಕಾ ಮತ್ತು ಒಂದು ದಿನದ ಹ್ಯಾಂಡ್ಸ್ ಆನ್ ವರ್ಕ್ ಶಾಪ್ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ಏ. ಜೆ. ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ ಭರತ್ ಶೆಟ್ಟಿಯವರು ಉದ್ಘಾಟಿಸಿದರು. ಅತಿಥಿ ಸ್ಪೀಕರ್ ಗಳಾದ ಪ್ರೊ.ಡಾ. ಎನ್ .ಎಸ್ ಶ್ರೀನಾಥ್ , ಕೃಷ್ಣ ದೇವರಾಯ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ , ಬೆಂಗಳೂರು ಹಾಗೂ ಡಾ. ರೆನಾಟೋ ಡಿ ಮಾರ್ಟಿನೋ , ಸ್ಕ್ಯಾನ್ ರೇ ಡೆಂಟಲ್ ಟೆಕ್ನಾಲಜಿ , ಇಟಲಿ ಇವರು ಫೀಝೋ ಸರ್ಜರಿಯ ಬಳಕೆಯ ಬಗ್ಗೆ ತಿಳಿಸಿದರು. ಓರಲ್ ಅಂಡ್ ಮ್ಯಾಕ್ಸಿಲ್ಲೋ ಫೇಷಿಯಲ್ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್ ರೈ ಯವರು ಸ್ವಾಗತಿಸಿದರು. ಡಾ.ಶ್ರೇಯಸ್ ಸೊರಕೆಯವರು ವಂದಿಸಿದರು.


Spread the love