ನಿರಾಶಾದಾಯಕ, ನೀರಸ ಹಾಗೂ ದೂರ ದೃಷ್ಠಿಯ ಕೊರತೆಯ ಬಜೆಟ್: ಕ್ಯಾಪ್ಟನ್ ಕಾರ್ಣಿಕ್

Spread the love

ನಿರಾಶಾದಾಯಕ, ನೀರಸ ಹಾಗೂ ದೂರ ದೃಷ್ಠಿಯ ಕೊರತೆಯ ಬಜೆಟ್: ಕ್ಯಾಪ್ಟನ್ ಕಾರ್ಣಿಕ್

ಮಂಗಳೂರು: ರಾಜ್ಯದ 12ನೇ ಬಜೆಟ್ ಮಂಡಿಸಿದ ಬಜೆಟ್ ತಜ್ಞ ಸಿದ್ಧರಾಮಯ್ಯ ರವರ 2017-18ನೆ ಸಾಲಿನ ಬಜೆಟ್ ಕೇವಲ ಆಯ-ವ್ಯಯದ ಲೆಕ್ಕಾಚಾರಕಷ್ಟೇ ಸೀಮಿತವಾಗಿರುವುದು ರಾಜ್ಯದ ದುರದೃಷ್ಟ ಎಂದು ರಾಜ್ಯವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಎಂದು ಅಭಿಪ್ರಾಯಪಟ್ಟಿದ್ದಾರೆ ನಿರಂತರ ಗಂಭೀರ ಬರ ಎದುರಿಸುತ್ತಿರುವ ಪರಿಸ್ಥಿತಿಯಲ್ಲಿ ಗ್ರಾಮೀಣ ಜನತೆ ಹಾಗೂ ಕೃಷಿಕರ ಸಹಾಯಕ್ಕೆ ಮುಂದಾಗದಿರುವುದು ಬಜೆಟ್‍ನ ಘೋರ ವೈಫಲ್ಯ.

ರಾಜ್ಯದ ಶಿಕ್ಷಕರು ಕಾತರದಿಂದ ನಿರೀಕ್ಷಿಸುತ್ತಿದ್ದ ಕಾಲ್ಪನಿಕ ಸಮಸ್ಯೆಗೆ ಪರಿಹಾರ, ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಅನುಮತಿ, ಕನಿಷ್ಠ 2000 ಇಸವಿಯ ವರೆಗೆ ಪ್ರಾರಂಭವಾದ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು, ವೈದ್ಯನಾಥನ್ ವರದಿಯ ಅನುಷ್ಠಾನದಿಂದ ದೈಹಿಕ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಮುಂತಾದ ಅನೇಕ ನಿರೀಕ್ಷೆಗಳನ್ನು ಸುಳ್ಳಾಗಿಸಿ ಶಿಕ್ಷಕರ ಉತ್ಸಾಹಕ್ಕೆ ತಣ್ಣೀರೆರಿಚಿದ ಬಜೆಟ್.

ರಾಷ್ಟ್ರವೆಲ್ಲ ಒಪ್ಪಿಕೊಂಡರೂ, ಬಜೆಟ್ ಭಾಷಣವನ್ನು ಕೇಂದ್ರ ಸರ್ಕಾರ ಕೈಗೊಂಡ ಅಪಮೌಲೀಕರಣದ ಟೀಕೆಗೆ ಉಪಯೋಗಿಸಿರುವುದು ಕೀಳುಮಟ್ಟದ ರಾಜಕೀಯ.

7ನೇ ವೇತನ ಆಯೋಗದ ರಚನೆ, ಕರಾವಳಿ ಜಿಲ್ಲೆಗಳಿಗೆ ಪಶ್ಚಿಮ ವಾಹಿನಿಗಾಗಿ 100 ಕೋಟಿ ಅನುದಾನ, ಕೊನೆಗಾದರೂ 49 ಹೊಸ ತಾಲೂಕುಗಳ ರಚನೆ ಮಾಡುವ ಸರ್ಕಾರದ ನಿರ್ಣಯ ಹಾಗೂ ಕಾನೂನು ಪದವೀಧರರ ಮಾಸಿಕ ತರಬೇತಿ ಭತ್ಯೆಯನ್ನು 2000 ದಿಂದ 4000ಕ್ಕೆ ಏರಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ.


Spread the love