ನೃತ್ಯನಿಕೇತನ ಕೊಡವೂರು ಸಂಸ್ಥೆಯಿಂದ ಅಶಕ್ತರಿಗೆ ಸಹಾಯ ಮಾಡುವ “ಕೃಷ್ಣ ಕರುಣ” ಕಾರ್ಯಕ್ರಮ

ನೃತ್ಯನಿಕೇತನ ಕೊಡವೂರು ಸಂಸ್ಥೆಯಿಂದ ಅಶಕ್ತರಿಗೆ ಸಹಾಯ ಮಾಡುವ “ಕೃಷ್ಣ ಕರುಣ” ಕಾರ್ಯಕ್ರಮ

ಉಡುಪಿ: ಶ್ರೀ ಕೃಷ್ಣಜನ್ಮಾಷ್ಟಮಿಯ ಸಂದರ್ಭದಲ್ಲಿ ನೃತ್ಯನಿಕೇತನ ಕೊಡವೂರು ಸಂಸ್ಥೆಯ ಸಮಾನ ಮನಸ್ಕ ಹದಿನಾಲ್ಕು ನೃತ್ಯಕಲಾವಿದೆಯರು ಕೃಷ್ಣಗೋಪಿಕೆಯರ ವೇಷ ಧರಿಸಿ ಸಂಗ್ರಹಿಸಿದ ಹಣವನ್ನು ಅವಶ್ಯವಿರುವವರಿಗೆ ಶುಕ್ರವಾರ ಹಸ್ತಾಂತರಗೊಳಿಸಲಾಯಿತು.

ಶ್ರೀ ಕೃಷ್ಣಜನ್ಮಾಷ್ಟಮಿಯ ಸಂದರ್ಭದಲ್ಲಿ ನೃತ್ಯನಿಕೇತನಕೊಡವೂರು ಸಂಸ್ಥೆಯ ಸಮಾನ ಮನಸ್ಕ ಹದಿನಾಲ್ಕು ನೃತ್ಯಕಲಾವಿದೆಯರು ಕೃಷ್ಣಗೋಪಿಕೆಯರ ವೇಷ ಧರಿಸಿ ಸುಮಾರು 35 ಮನೆಗಳಲ್ಲಿ ನರ್ತಿಸಿ ರೂಪಾಯಿ 1,31,000 ವನ್ನು, ಸಂಗ್ರಹಿಸಿದ್ದು ಸಮಾಜದ ಬಡರೋಗಿಗಳಿಗೆ, ನೊಂದವರಿಗೆ, ಅಂಗವೈಕಲ್ಯವಿದ್ದರೂ ಸಾಧನೆ ಮಾಡಿದವರಿಗೆ ನೀಡುವ “ಕೃಷ್ಣ ಕರುಣ” ಕಾರ್ಯಕ್ರಮ ಮೂಲಕ ಹಸ್ತಾಂತರಿಸಲಾಯಿತು.

ಸಂಸ್ಥೆಯ ಹದಿನಾಲ್ಕು ಕಲಾವಿದರಾದ ವಿದುಷಿ ಅನಘಶ್ರೀ, ವಸುಂದರಾ, ಅಶ್ವಿನಿ, ಸಾಧನಾ, ಶ್ರೇಯಾ ಭಟ್, ಶ್ರೇಯಾ ಆಚಾರ್ಯ, ಶ್ರೇಯಾ ಪೈ, ಸಂಜನಾ, ಶೀತಲ್, ಪ್ರಿಯವಂದ, ನಿಖಿತ, ಭಾವನ, ಚೈತನ್ಯ ಮತ್ತು ಸುಪ್ರಭಾ ಕೃಷ್ಣ ಗೋಪಿಕೆಯ ವೇಷ ಧರಿಸಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ನಗರಸಭಾಧ್ಯಕ್ಷರಾದ ಎಂ ಸೋಮಶೇಖರ್ ಭಟ್, ಸಾಹಿತ್ಯ ವಿಮರ್ಶಕರಾದ ಪ್ರೋ| ಮುರಳೀಧರ ಉಪಾಧ್ಯ, ಕಿದಿಯೂರು ಹೊಟೇಲ್ಸ್ ನಿರ್ದೇಶಕರಾದ ಜಿತೇಶ್ ಕಿದಿಯೂರು, ಉದ್ಯಮಿ ರಂಜನ್ ಕಲ್ಕೂರ, ಕಲಾ ವಿಮರ್ಶಕರಾದ ಪ್ರತಿಭಾ ಎಲ್ ಸಾಮಗ, ಮಾಜಿ ಲಯನ್ ಕೋ ಆರ್ಡಿನೇಟರ್ ರಂಜನಾ ಶೆಟ್ಟಿ, ನೃತ್ಯನಿಕೇತನ ಕೊಡವೂರು ಇದರ ವಿದ್ವಾನ್ ಸುಧೀರ್ ರಾವ್, ವಿದುಷಿ ಮಾನಸಿ ಸುಧೀರ್ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ಬಳಿಕ ನೃತ್ಯನಿಕೇತನ ಕೊಡವೂರು ಕಲಾವಿದರಿಂದ “ಕುಣಿದಾಡೋಕೃಷ್ಣ” ಎನ್ನುವ ನೃತ್ಯ ಕಾರ್ಯಕ್ರಮ ಜರುಗಿತು.