ನೇತ್ರಾವತಿ ಸೇತುವೆಯಲ್ಲಿ ಅನಾಥ ಬೈಕ್: ಯುವಕ ಶಿವಮೊಗ್ಗದಲ್ಲಿ ಪತ್ತೆ

Spread the love

ನೇತ್ರಾವತಿ ಸೇತುವೆಯಲ್ಲಿ ಅನಾಥ ಬೈಕ್: ಯುವಕ ಶಿವಮೊಗ್ಗದಲ್ಲಿ ಪತ್ತೆ

ಉಳ್ಳಾಲ : ಬುಧವಾರ ನೇತ್ರಾವತಿ ಸೇತುವೆಯಲ್ಲಿ ಅನಾಥವಾಗಿ ಬೈಕೊಂದು ಪತ್ತೆಯಾಗಿದ್ದು ಅದರ ಸವಾರ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದ್ದ ಬೆನ್ನಲ್ಲೆ ಬೈಕ್ ಸವಾರ ಯುವಕ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಖಾಸಗಿ ಕಂಪನಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಕುರ್ನಾಡು ನಿವಾಸಿ ಪ್ರವೀಣ್ ಸಫಲ್ಯ ಎಂಬಾತನ ಬೈಕ್ ನೇತ್ರಾವತಿ ನದಿ ತಟದಲ್ಲಿ ಪತ್ತೆಯಾಗಿತ್ತು. ಮಂಗಳವಾರ ರಾತ್ರಿ ಕಚೇರಿಯಿಂದ ಹೊರಟಿದ್ದ ಈತ ನಂತರ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಹೀಗಾಗಿ ಈತ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.

ಇಂದು ಬೆಳಿಗ್ಗೆಯಿಂದಲೇ ಸೇತುವೆ ಸುತ್ತ ಜನರು ಸೇರಿದ್ದು, ಹುಡುಕಾಟ ನಡೆಸಿದ್ದರು. ಆದರೆ ಇದೀಗ ತಾನು ಶಿವಮೊಗ್ಗದ ಸಂಬಂಧಿಕರ ಮನೆಯಲ್ಲಿ ಇರುವುದಾಗಿ ತಿಳಿಸಿದ್ದಾನೆ ಎಂಬ ಮಾಹಿತಿ ಬಂದಿದೆ.


Spread the love