ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Spread the love

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪೆರಿಯಡ್ಕ ನಿವಾಸಿ (53) ಕೆ ಎನ್ ನಾಗೇಗೌಡ ಎಂದು ಗುರುತಿಸಿಲಾಗಿದೆ.

ಈತನ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣಿಗ್ಗೆ ಮೇಲಾಧಿಕಾರಿಗಳ ಮುಖಾಂತರ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸುಳ್ಯ ನ್ಯಾಯಾಲಯದ ಸಿಸಿ ನಂಬ್ರ 6341/16 ರಲ್ಲಿ, ಪುತ್ತೂರು ನ್ಯಾಯಲಯದಿಂದ ಸಿಸಿ ನಂಬ್ರ 275/13 ರಲ್ಲಿ , ಸಿಸಿ ನಂಬ್ರ 215/16 ರಲ್ಲಿ . ಹಾಸನ ನ್ಯಾಯಾಲಯದಿಂದ ಸಿಸಿ ನಂಬ್ರ 1281/18 ರಲ್ಲಿ , ಶಿವಮೊಗ್ಗ ನ್ಯಾಯಾಲಯದಿಂದ ಸಿಸಿ ನಂಬ್ರ 375/18, ಸಿಸಿ ನಂಬ್ರ 372/2018 , ಪುತ್ತೂರು ನ್ಯಾಯಾಲಯದಿಂದ ಸಿಸಿ ನಂಬ್ರ 37/2015, ಸಿಸಿ ನಂಬ್ರ 91/2013, ವಾರಂಟ್ ಗಳು ಸ್ವೀಕೃತವಾಗಿದ್ದು, ಈ ವಾರಂಟ್ ಗಳ ಪೈಕಿ ಹಾಸನ ನ್ಯಾಯಾಲಯದಿಂದ ಸಿಸಿ ನಂಬ್ರ 1281/18 ರಲ್ಲಿ, ಶಿವಮೊಗ್ಗ ನ್ಯಾಯಾಲಯದಿಂದ ಸಿಸಿ ನಂಬ್ರ 375/18, ಸಿಸಿ ನಂಬ್ರ 372/2018, ಪುತ್ತೂರು ನ್ಯಾಯಾಲಯದಿಂದ ಸಿಸಿ ನಂಬ್ರ 37/2015, ಸಿಸಿ ನಂಬ್ರ 91/2013, ವಾರಂಟ್ ಗಳು ಈಗಾಗಲೇ ಕಾರ್ಯಗತವಾಗದೇ ನ್ಯಾಯಾಲಯಕ್ಕೆ ಮರುನಿವೇದಿಸಲಾಗಿದೆ.

ಆರೋಪಿಗೆ ಸುಳ್ಯ ನ್ಯಾಯಾಲಯದ ಸಿಸಿ ನಂಬ್ರ 6341/16 ರಲ್ಲಿ, ಪುತ್ತೂರು ನ್ಯಾಯಲಯದಿಂದ ಸಿಸಿ ನಂಬ್ರ 275/13 ರಲ್ಲಿ , ಸಿಸಿ ನಂಬ್ರ 215/16 ರಲ್ಲಿವಾರಂಟ್ ಇರುವ ಬಗ್ಗೆ ಮಾಹಿತಿ ಇದ್ದರೂ ದಸ್ತಗಿರಿಗೆ ಸಿಗದೇ ತಲೆಮರೆಸಿಕೊಂಡಿದ್ದವನನ್ನು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಲಾಗಿದೆ.

ಅಲ್ಲದೇ ಈತನ ವಿರುದ್ದ ಕರ್ನಾಟಕ ರಾಜ್ಯದ ವಿವಿದ ನ್ಯಾಯಾಲಯದಲ್ಲಿ ಹಲವಾರು ಸಿವಿಲ್ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಇದೆ.


Spread the love