ನ್ಯಾಯಾಲಯದ ಆವರಣದಲ್ಲೇ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಎಪಿಪಿ

Spread the love

ನ್ಯಾಯಾಲಯದ ಆವರಣದಲ್ಲೇ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಎಪಿಪಿ

ತುಮಕೂರು : ತಿಪಟೂರು ನ್ಯಾಯಾಲಯದ ಆವರಣದಲ್ಲೇ ಕಕ್ಷಿದಾರಿಂದ 20 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಎಪಿಪಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ತಿಪಟೂರು ಮುನಿಸಿಫ್ ನ್ಯಾಯಾಲಯದ ಪೂರ್ಣಿಮಾ ಜಿ. ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್.

ಕೆ ಇ ಬಿ ಇಂಜಿನಿಯರ್ ಗುರುಬಸವಸ್ವಾಮಿ ಎಂಬವರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ದಾಳಿ ನಡೆದಿದೆ.ಪ್ರಕರಣ ಸಂಬಂಧಿಸಿದಂತೆ 40000 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 20 ಸಾವಿರ ಅಕೌಂಟ್ ಮೂಲಕ ಪಡೆದಿದ್ದರು.20 ಸಾವಿರ ಹಣ ನೇರವಾಗಿ ಪಡೆಯುವಾಗ ಎಸಿಬಿ ಯವರು ದಾಳಿ ನಡೆಸಿದ್ದಾರೆ.

ಎಪಿಪಿ ಕಚೇರಿಯಲ್ಲೇ ರಾತ್ರಿ 10.30 ರವೆರೆಗೆ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.2015 ರಲ್ಲಿ ವಿದ್ಯುತ್ ಕಂಬ ವೃದ್ದೆ ಮೇಲೆ ಬಿದ್ದು ಕಾಲು ತುಂಡಾಗಿತ್ತು.ಈ ಪ್ರಕರಣದ ಪಬ್ಲಿಕ್ ಪ್ರಾಸಿಕ್ಯೂಟರ್ ವಕಾಲತ್ತು ವಹಿಸಿದ್ದರು.ನಿನ್ನೆ ನ್ಯಾಯಾಲಯದ ಲ್ಲಿ ಖುಲಾಸೆಗೊಂಡಿತ್ತು. ಮೇಲ್ಮನವಿ ಸಲ್ಲಿಸದಿರಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಆಗ ದೂರಿನ ಮೇರೆಗೆ ಎಸಿಬಿ ತಂಡ ಎಪಿಪಿ ಕಚೇರಿಗೆ ದಾಳಿ ನಡೆಸಿದೆ.


Spread the love