ನ 22: ರಿಯಾದ್ – ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ (DKMO) ಕುಟುಂಬ ಸಂಗಮ

Spread the love

ನ 22: ರಿಯಾದ್ – ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ (DKMO) ಕುಟುಂಬ ಸಂಗಮ

ಸೌದಿ ಅರೇಬಿಯಾದಲ್ಲಿರುವ ಕರ್ನಾಟಕ ಮೂಲದ ಪ್ರಮುಖ ಸಾಮಾಜಿಕ ಸಂಘಟನೆ ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ (DKMO) ರಿಯಾದ್ ವತಿಯಿಂದ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಅನಿವಾಸಿ ಕನ್ನಡಿಗರ ಕುಟುಂಬ ಸಂಗಮ ಗ್ರಾಂಡ್ ವಿಂಟರ್ ಮೀಟ್ – 2018 ನವೆಂಬರ್ 22 ಗುರುವಾರ ರಾತ್ರಿ 9 ಗಂಟೆಯಿಂದ ರಿಯಾದಿನ ಖಸೀಮ್ ರಸ್ತೆಯಲ್ಲಿರುವ ಅಲ್-ಅವಾಲಿ ರೆಸಾರ್ಟ್ ನಲ್ಲಿ ನಡೆಯಲಿದೆ ಎಂಧು ಸಂಘಟಕರು ತಿಳಿಸಿದ್ದಾರೆ. ದಕ್ಷಿಣ ಕರ್ನಾಟಕ ಮೂಲದ ಅನಿವಾಸಿಗಳನ್ನು ಒಂದೇ ಸೂರಿನಲ್ಲಿ ಸಂಘಟಿಸುವ ಉದ್ದೇಶದ ಈ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ, ಕಲೆ ಮತ್ತು ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ಕುಟುಂಬದ ಆಧಾರಸ್ಥಂಭವಾಗಿರುವ ಅನಿವಾಸಿ ಭಾರತೀಯರ ಹಠಾತ್ ಮರಣದ ಸಂಧರ್ಭ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಸ್ಥಾಪನೆಯಾದ ಡಿಕೆಎಂಒ ಸಂಸ್ಥೆ ಈ ಹಿಂದೆ ದಕ್ಷಿಣ ಕರ್ನಾಟಕದಾದ್ಯಂತ ಒಟ್ಟು 10 ಸದಸ್ಯರ ಕುಟುಂಬಕ್ಕೆ ಪರಿಹಾರ ನಿಧಿ ನೀಡಿದೆ. ಮುಖ್ಯವಾಗಿ ಅನಿವಾಸಿ ಭಾರತೀಯರು ಸೌದಿ ಅರೇಬಿಯಾದಲ್ಲಿ ಮತ್ತು ಸ್ವದೇಶದಲ್ಲಿ ಸಂಕಷ್ಟಕ್ಕೊಳಗಾದಾಗ ಸಹಕಾರ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಪ್ರಸ್ತುತ, 1000+ ದಕ್ಷಿಣ ಕರ್ನಾಟಕ ಮೂಲದ ಅನಿವಾಸಿ ಸದಸ್ಯನ್ನು ಹೊಂದಿದೆ.

ಆರಂಭದಲ್ಲಿ,DKMO ಕುಟುಂಬ ಪರಿಹಾರ ನಿಧಿ (ಫ್ಯಾಮಿಲಿ ರಿಲೀಫ್ ಫಂಡ್) ಯೋಜನೆಯ ಮೂಲಕ ಮರಣ ಹೋದಿಂದ ಅನಿವಾಸಿ ಭಾರತೀಯರ ಕುಟುಂಬವನ್ನು ಬೆಂಬಲಿಸುವ ಕಾರ್ಯಸೂಚಿಯೊಂದರಿಂದ ರಚಿಸಲಾಗಿದೆ, ಆದರೆ ಈಗ ಸಂಸ್ಥೆಯು ಸದಸ್ಯರಿಗೆ ಅಗತ್ಯವಾದ ಹಣಕಾಸಿನ ಸಾಲ, ಸಂಕಷ್ಟದಲ್ಲಿದ್ದು ಊರಿಗೆ ತೆರಳುವವರಿಗೆ ವಿಮಾನ ಪ್ರಯಾಣ ಟಿಕೆಟ್, ಸಾಮಾನ್ಯ ಪರಿಹಾರ ನಿಧ, ಸ್ವದೇಶದಲ್ಲಿ ಸ್ವಯಂ ಉದ್ಯೋಗವನ್ನು ಕಂಡುಕೊಳ್ಳಲು ಮೈಕ್ರೋ ಸಾಲ, ವರಧಕ್ಷಿಣೆ ವಿರೋಧಿ ಅಭಿಯಾನ ಮುಂತಾದ ಯೋಜನೆಗಳನ್ನು ನಡೆಸುತ್ತಿದೆ. ದ.ಕ ಜಿಲ್ಲೆಯಲ್ಲಿ ಅರೋಗ್ಯ ಮತ್ತು ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಸಮೂದಾಯದಲ್ಲಿ ಜಾಗೃತಿ ಮೂಡಿಸಲು ಈ ವರ್ಷದಿಂದ ಸಂಯೋಜಕರನ್ನು ನೇಮಿಸಿದೆ.


Spread the love