ನವೆಂಬರ್ 23-25 :ಮತದಾರರ ವಿಶೇಷ ನೋದಣಿ ಆಂದೋಲನ

Spread the love

ನವೆಂಬರ್ 23-25 :ಮತದಾರರ ವಿಶೇಷ ನೋದಣಿ ಆಂದೋಲನ

ಮಂಗಳೂರು : ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2019 ನವೆಂಬರ್ 23, 24 ಮತ್ತು 25 “ ಮತದಾರರ ವಿಶೇಷ ನೋಂದಣಿ ಅಭಿಯಾನ”ನಡೆಯಲಿದೆ.

ಮತದಾರರ ಪಟ್ಟಿಗೆ ಹೆಸರು ಸೇರಿಸಲು ನವೆಂಬರ್ 20 ಕೊನೆಯ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ವಿಕಲಚೇತನರು, ಮಹಿಳೆಯರು, ದುರ್ಬಲರು ಮತ್ತು ಯುವ ಮತದಾರರ ಅನುಕೂಲಕ್ಕಾಗಿ ಇದೇ ನವಂಬರ್ 23, 24 ಮತ್ತು 25 ಮತದಾರರ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನೋದಣಿ ಅಭಿಯಾನವು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ನಡೆಯಲಿದೆ.

ಅರ್ಹತೆಗಳು: 01.01.2019 ರ ಅರ್ಹತಾ ದಿನಾಂಕದಂತೆ 18 ವರ್ಷ ವಯೋಮಾನದ ಭಾರತೀಯ ಪ್ರಜೆಯಾಗಿರಬೇಕು. ಆಯಾ ವಿಧಾನಸಭಾ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರಬೇಕು.

ಮತದಾರರ ಮಿಂಚಿನ ನೋಂದಣೆ ಅಭಿಯಾನಕ್ಕೆ ಅಗತ್ಯವಿರುವ ದಾಖಲೆಗಳು: ವಯಸ್ಸಿನ ಬಗ್ಗೆ ದಾಖಲೆಗಳು: ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡು, ಪಾಸ್ ಪೋರ್ಟ, ಎಸ್.ಎಸ್.ಎಲ್.ಸಿ/ಪಿ.ಯು.ಸಿ ಅಂಕಪಟ್ಟಿಗಳು, ಪಾನ್ ಕಾರ್ಡು ಹಾಗೂ ವೈದ್ಯಕೀಯ ಪ್ರಮಾಣ ಪತ್ರ. ವಾಸಸ್ಥಳದ ಬಗ್ಗೆ ದಾಖಲೆಗಳು: ಪಡಿತರ ಚೀಟಿ, ಆಧಾರ್ ಕಾರ್ಡು, ರಹವಾಸಿ ಪತ್ರ, ಗ್ಯಾಸ್ ಸಿಲಿಂಡರ್ ಸ್ವೀಕೃತಿ ರಷೀದಿ, ವಿದ್ಯುತ್ ಬಿಲ್ ಪಾವತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಬಾಡಿಗೆ ಕರಾರು ಪತ್ರ ಹಾಗೂ ಇನ್ನಿತರ ದಾಖಲೆಗಳು, ಎರಡು ಪಾಸ್ ಪೋರ್ಟು ಅಳತೆಯ ಭಾವಚಿತ್ರಗಳು.

ಯಾವುದಕ್ಕೆ ಯಾವ ಅರ್ಜಿ: ನಮೂನೆ- 6: 18 ವರ್ಷ ಪೂರೈಸಿದ ಹೊಸ ಮತದಾರರು ಹಾಗೂ ಒಂದು ಕ್ಷೇತ್ರದಿಂದ ಮತ್ತೊಂದೆಡೆ ವಾಸಸ್ಥಳ ಬದಲಾಯಿಸಿದವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ನಮೂನೆ-6ಎ: ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು, ನಮೂನೆ-7: ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು, ನಮೂನೆ-8: ಹೆಸರು, ತಂದೆಯ ಹೆಸರು, ಮನೆ ವಿಳಾಸ, ವಯಸ್ಸಿಗೆ ಹಾಗೂ ಭಾವಚಿತ್ರಕ್ಕೆ ಸಂಬಂಧಿಸಿದ ದೋಷಗಳಿದ್ದರೆ ಸರಿಪಡಿಸಿಕೊಳ್ಳಲು. ನಮೂನೆ-8ಎ: ಒಂದೇ ವಿಧಾನಸಭಾ ಕ್ಷೇತ್ರದೊಳಗೆ ವಾಸಸ್ಥಳ ಬದಲಾಯಿಸಿದ ಸಂದರ್ಭದಲ್ಲಿ ಸಲ್ಲಿಸಬೇಕಿರುವ ಅರ್ಜಿ.

ದಿನಾಂಕ: 01.01.2019ರಂದು 18 ವರ್ಷ ಪ್ರಾಯ ತುಂಬಿದ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸದೇ ಇರುವ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಮೂರು ದಿನದ ವಿಶೇಷ ನೋದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

ಎಲ್ಲಾ ಬೂತುಮಟ್ಟದ ಅಧಿಕಾರಿಯವರು ನವೆಂಬರ್ 23, 24. ಮತ್ತು ದಿನಾಂಕ 25 ರಂದು ಪೂರ್ವಾಹ್ನ 10 ಗಂಟೆಯಿಂದ ಸಾಯಂಕಾಲ 5.30 ಗಂಟೆವರೆಗೆ ಮತಗಟ್ಟೆಯಲ್ಲಿ ಹಾಜರಿದ್ದು, ಅಲ್ಲಿಗೆ ಬರುವ ಸಾರ್ವಜನಿಕರ ಹೆಸರು ಮತದಾರರ ಪಟ್ಟಿಯಲ್ಲಿ ನೊಂದಾಯಿಸಲ್ಪಟ್ಟಿದೆಯೆ ಎಂಬುದನ್ನು ಪರಿಶೀಲಿಸಿ ಅರ್ಹ ಮತದಾರರಿಂದ ನಮೂನೆ-6 ನ್ನು ಸ್ವೀಕರಿಸುವುದು.

ನವೆಂಬರ್ 23, 24 ಮತ್ತು 25 ರಂದು ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ವಿಶೇಷ ನೊಂದಣಿ ಆಂದೋಲನ ನಡೆಯುತ್ತಿದೆ ಎಂಬುದನ್ನು ದೃಢಪಡಿಸಿಕೊಳ್ಳಲು, ನಾಡಕಚೇರಿ ಉಪತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರು ಮತ್ತಿತರ ಕಾರ್ಯನಿರ್ವಾಹಕ ಸಿಬ್ಬಂದಿ ಅನಿರೀಕ್ಷಿತ ಭೇಟಿ ನೀಡುವುದು. ಅಲ್ಲದೆ ಆಯ್ದ ಮತಗಟ್ಟೆಗಳಿಗೆ ಇಖಔ/ಂಇಖಔ ಕೂಡ ಅನಿರೀಕ್ಷಿತ ಭೇಟಿ ನೀಡಿ ದೃಢಪಡಿಸಿಕೊಳ್ಳುವುದು.

ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಮತ್ತು ಬೂತು ಮಟ್ಟದ ಅಧಿಕಾರಿಗಳ ತಂಡಗಳನ್ನು ರಚಿಸಿ, ತಮ್ಮ ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಲೇಜುಗಳಿಗೆ ಬೇಟಿ ನೀಡಿ ಹಚ್ಚಿನ ಸಂಖ್ಯೆಯಲ್ಲಿ ಮತದಾರರು ನೋಂದಣಿಯಾಗುವಂತೆ ಕ್ರಮ ಕೈಗೊಳ್ಳುವುದು. ವಿಶೇಷ ನೋಂದಣಿ ಅಭಿಯಾನದ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಳ್ಳುವುದು. ವಿಶೇಷ ನೊಂದಣಿ ಆಂದೋಲನದ ಅನ್ವಯ ಸ್ವೀಕರಿಸಲಾದ ಎಲ್ಲಾ ನಮೂನೆ-6 ರ ವಿವರಗಳನ್ನು ಅದೇ ದಿನ ಸಾಯಂಕಾಲ 6 ಗಂಟೆಯೊಳಗೆ ಈ ಕಚೇರಿಗೆ ತಪ್ಪದೇ ವರದಿ ಮಾಡುವುದು.

ಸದ್ರಿ ಆಂದೋಲನದ ಅನ್ವಯ ಸ್ವೀಕರಿಸಲಾದ ಎಲ್ಲಾ ನಮೂನೆಗಳನ್ನು ಬೂತು ಮಟ್ಟದ ಅಧಿಕಾರಿಯವರಿಂದ ಪಡೆದು, ಅದನ್ನು ನಿಯಮಾನುಸಾರ ತನಿಖೆ ನಡೆಸಿ, ದಿನಾಂಕ 20.12.2018 ರೊಳಗಾಗಿ ಸಾಪ್ಟ್‍ವೇರ್‍ನಲ್ಲಿ ಅಳವಡಿಸಿ ತಪ್ಪದೆ ಇತ್ಯರ್ಥಪಡಿಸುವುದು.

ಆದುದರಿಂದ ನವೆಂಬರ್ 23, 24 ಮತ್ತು 25 ರಂದು ಮೇಲ್ಕಾಣಿಸಿರುವಂತೆ ಹಮ್ಮಿಕೊಳ್ಳಲಾದ ಮಿಂಚಿನ ನೋಂದಣಿ ಆಂದೋಲನವನ್ನು ಯಶಸ್ವಿಯಾಗಿ ಕೈಗೊಳ್ಳುವ ಬಗ್ಗೆ ಕೈಗೊಂಡ ಸಿದ್ದತೆಗಳ ಕುರಿತು ಮರು ಇ-ಮೇಲ್ ಸಂದೇಶದ ಮೂಲಕ ಈ ಕಛೇರಿಗೆ ಪಾಲನಾ ವರದಿಯನ್ನು ತಪ್ಪದೆ ಒಪ್ಪಿಸುವಂತೆ ತಿಳಿಸಲಾಗಿದೆ. ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ದ.ಕ ಜಿಲ್ಲೆ ಇವರ ಪ್ರಕಟಣೆ ತಿಳಿಸಿದೆ.


Spread the love