ನ. 30 – ರಿಯಾದಿನಲ್ಲಿ ಅವಾಜ್ ಇಂಡಿಯನ್ ಫೆಸ್ಟ್ – 2018

Spread the love

ನ. 30 – ರಿಯಾದಿನಲ್ಲಿ ಅವಾಜ್ ಇಂಡಿಯನ್ ಫೆಸ್ಟ್ – 2018

ಆಮ್ ಆದ್ಮಿ ವೆಲ್ಫೇರ್ ಅಸೋಸಿಯೇಷನ್ ಸೌದಿಅರೇಬಿಯಾ (ಆವಾಸ್) ವತಿಯಿಂದ ಪ್ರತಿ ವರ್ಷ ನಡೆಸುವ “ಅವಾಜ್ ಇಂಡಿಯನ್ ಫೆಸ್ಟ್-2018” ನವೆಂಬರ್ 30 ಶುಕ್ರವಾರ ಸಂಜೆ 3.30 ರಿಂದ ರಿಯಾದಿನ ನೊಫಾ ಆಟೋರಿಯಂ, ಎಕ್ಸಿಟ್ 18 ರಲ್ಲಿ ನಡೆಯಲಿದೆ.

ಸಂಜೆ 3.30 ರಿಂದ 6 ಗಂಟೆಯ ತನಕ ರಿಯಾದಿನಲ್ಲಿ ಪ್ರಥಮ ಭಾರಿಗೆ ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಐ.ಐ.ಟಿ ತಂಡದಿಂದ ಹೈಸ್ಕೂಲು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸ್ಪರ್ಧಾತ್ಮಕ ವೈದ್ಯಕೀಯ, ತಾಂತ್ರಿಕ ಮತ್ತಿತರ ಉನ್ನತ ಶಿಕ್ಷಣದ ಪೂರ್ವ-ತಯಾರಿ, ಉದ್ಯೋಗಾವಕಾಶಗಳು, ವಿದ್ಯಾರ್ಥಿ ವೇತನ ಸವತ್ತುಗಳ ಬಗ್ಗೆ ಕಾರ್ಯಗಾರ ನೆಡೆಸಿಕೊಡಲಿದ್ದಾರೆ.

6 ಗಂಟೆಯ ನಂತರ ಭಾರತದ ವಿವಿಧ ರಾಜ್ಯಗಳ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, ಕಾರ್ಯಕ್ರಮದುದ್ದಕ್ಕೂ ಉಚಿತ ವೈದ್ಯಕೀಯ ತಪಾಷಣೆ ಕ್ಯಾಂಪ್ ಹಮ್ಮಿಕೊಳ್ಳಲಾಗಿದೆ ಸಮಾರಂಭದಲ್ಲಿ ಆಮ್ ಆದ್ಮಿ ಪಕ್ಷದ ರಾಷ್ತ್ರೀಯ ವಕ್ತಾರರಾದ ಶ್ರೀ ದಿಲೀಪ್ ಕುಮಾರ್ ಪಾಂಡೆ ಮುಖ್ಯ ಅಥಿತಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.


Spread the love