ಪಟಾಕಿ ಸಿಡಿಸಲು ತಡೆ: ವಾಚ್ ಮೆನ್ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ

Spread the love

ಪಟಾಕಿ ಸಿಡಿಸಲು ತಡೆ: ವಾಚ್ ಮೆನ್ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ

ಮಣಿಪಾಲ : ಅಪಾರ್ಟ್‌ಮೆಂಟ್‌ನ ಗೇಟಿನ ಒಳಗೆ ಪಟಾಕಿ ಮತ್ತು ಮದ್ಯದೊಂದಿಗೆ ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸುತ್ತಿರುವಾಗ ತಡೆಯಲು ಹೋದ ವಾಚ್ಮೆನ್ ಒರ್ವರಿಗೆ 10 ಮಂದಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

ಅಕ್ಟೋಬರ್ 30 ರಂದು ಬೆಳಗಿನ ಜಾವ 2ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರ ಅದಿತಿ ಪರ್ವ ಅಪಾರ್ಟ್‌ಮೆಂಟ್‌ನ ಗೇಟಿನ ಒಳಗೆ ಅಭಿಜಿತ್‌ ಕೋಟ್ಯಾನ್‌, ಶೋಧನ್‌, ಸುಹಾಸ್‌ ಹಾಗೂ ಇತರ 10 ಜನ ವಿಧ್ಯಾರ್ಥಿಗಳು ಪಟಾಕಿ ಮತ್ತು ಮದ್ಯದೊಂದಿಗೆ ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸುತ್ತಿರುವಾಗ ಅದನ್ನು ತಡೆಯಲು ಹೋದ ಕಾವಲುಗಾರ ವಿಜಯ್ ಕುಮಾರ್ ಎಂಬವರಿಗೆ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ತುಳಿದು, ಮೂಗು ಬಾಯಿಗೆ ಗಾಯ ಉಂಟು ಮಾಡಿದ್ದಾರೆ.

ಘಟನೆಯ ಕುರಿತು ವಿಜಯಕುಮಾರ್ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Spread the love