ಪಡುಬಿದ್ರೆಯಲ್ಲಿ ರೌಡಿಶೀಟರ್ ನವೀನ್ ಡಿಸೋಜಾನನ್ನು ಕಡಿದು ಕೊಲೆ

Spread the love

ಪಡುಬಿದ್ರೆಯಲ್ಲಿ ರೌಡಿಶೀಟರ್ ನವೀನ್ ಡಿಸೋಜಾನನ್ನು ಕಡಿದು ಕೊಲೆ

ಪಡುಬಿದ್ರೆ: ರೌಡಿಶೀಟರ್ ಓರ್ವನನ್ನು ದುಷ್ಕರ್ಮಿಗಳು ಕಡಿದು ಕೊಲೆ ಮಾಡಿದ ಘಟನೆ ಪಡುಬಿದ್ರಿ ಕಾಂಜರಕಟ್ಟೆ ಬಳಿ ಬುಧವಾರ ರಾತ್ರಿ ಸಂಭವಿಸಿದೆ.

ಕೊಲೆಯಾದ ವ್ಯಕ್ತಿಯನ್ನು ರೌಡಿಶೀಟರ್ ನವೀನ್ ಡಿಸೋಜಾ (38) ಎಂದು ಗುರುತಿಸಲಾಗಿದೆ.

ಪಡುಬಿದ್ರಿ-ಕಾರ್ಕಳ ರಸ್ತೆಯ ಕಾಂಜರಕಟ್ಟೆ ಸಮೀಪದ ಬಾರ್ ಎದುರು ಕೃತ್ಯ ನಡೆದಿದ್ದು, ನವೀನ್ ಬಾರಿಗೆ ಹೋಗಿ ಕುಡಿದು ಹೊರಬರುತ್ತಿದ್ದ ವೇಳೆ ಕಾದು ಕುಳಿತಿದ್ದ ತಂಡ ಏಕಾಎಕಿ ದಾಳಿ ನಡೆಸಿದ್ದು, ತೀವ್ರಗಾಯಗೊಂಡ ನವೀನ್ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.

ನವೀನ್ ಡಿಸೋಜಾನ ಮೇಲೆ ಕೊಲೆ ಯತ್ನ ಹಾಗೂ ಇತರ ಪ್ರಕರಣಗಳು ಪಡುಬಿದ್ರಿ ಹಾಗೂ ಕಾರ್ಕಳ ಠಾಣೆಗಳಲ್ಲಿ ದಾಖಲಾಗಿವೆ.

ಪಡುಬಿದ್ರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love