ಪಣಂಬೂರು ಬೀಚ್ ನಲ್ಲಿ ಮೂವರು ಯುವಕರು ನೀರು ಪಾಲು

Spread the love

ಪಣಂಬೂರು ಬೀಚ್ ನಲ್ಲಿ ಮೂವರು ಯುವಕರು ನೀರು ಪಾಲು

ಮಂಗಳೂರು: ವಿಹಾರಕ್ಕಾಗಿ ಕುಟುಂಬ ಸಮೇತರಾಗಿ ಆಗಮಿಸಿದ್ದು ಮೂವರು ಯುವಕರು ನೀರು ಪಾಲಾದ ಘಟನೆ ಭಾನುವಾರ ಸಂಜೆ ಪಣಂಬೂರ್ ಬೀಚ್ ನಲ್ಲಿ ನಡೆದಿದೆ.

ನೀರುಪಾಲಾದ ಯುವಕರನ್ನು ಬಜ್ಪೆ ಪೋರ್ಕೊಡಿ ನಿವಾಸಿಗಳಾದ ಮಿಲನ್ (20), ಲಿಖಿತ್ (18) ಮತ್ತು ನಾಗರಾಜ್ (24) ಎಂದು ಗುರುತಿಸಲಾಗಿದೆ

ಪಣಂಬೂರು ಬೀಚ್ ನಲ್ಲಿ ಕಡಲೋತ್ಸವ ನಡೆಯುತ್ತಿದ್ದು ಇದಕ್ಕಾಗಿ ಸಾವಿರಾರು ಮಂದಿ ಭಾಗವಹಿಸಿದ್ದರು. ಭಾನುವಾರ ಭಾರೀ ಗಾಳಿ ಇದ್ದು ಕಡಲಿನ ಅಬ್ಬರದ ಪರಿಣಾಮ ಸಮುದ್ರ ಸಾಹಸ ಕ್ರೀಡೆಗಳನ್ನು ನಿಲ್ಲಿಸಲಾಗಿತ್ತು ಮತ್ತು ಪ್ರವಾಸಿಗರನ್ನು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಯುವಕರು ಸೆಕ್ಯೂರಿಟಿ ಗಾರ್ಡ್ ಗಳ ಕಣ್ಣುತಪ್ಪಿಸಿ ಸಮುದ್ರಕ್ಕೆ ಈಜಾಡಲು ತೆರಳಿದ್ದು ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿದ್ದು ನೀರು ಪಾಲಾದ ಯುವಕರ ಪತ್ತೆ ಕಾರ್ಯ ನಡೆದಿದೆ.


Spread the love