ಪತ್ನಿ, ಮಗನಿಗೆ ಸೋಂಕು- ಕೊರೊನಾ ಅವಮಾನಕ್ಕೆ ವ್ಯಕ್ತಿ ನೇಣಿಗೆ ಶರಣು

Spread the love

ಪತ್ನಿ, ಮಗನಿಗೆ ಸೋಂಕು- ಕೊರೊನಾ ಅವಮಾನಕ್ಕೆ ವ್ಯಕ್ತಿ ನೇಣಿಗೆ ಶರಣು

ಬೆಂಗಳೂರು: ಪತ್ನಿ ಮತ್ತು ಮಗನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಬೆಂಗಳೂರಿನ ಹೆಸರುಘಟ್ಟದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರದ ನಿವಾಸಿ ನಾಗರಾಜು (56) ಮೃತ ವ್ಯಕ್ತಿ. ಹೆಸರುಘಟ್ಟ ಕೆರೆಯ ಬಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ನಾಗರಾಜು ಮಗನಿಗೆ ಮೊದಲು ಪಾಸಿಟಿವ್ ಬಂದಿತ್ತು. ನಂತರ ಪತ್ನಿ ಕೊರೊನಾ ಟೆಸ್ಟ್ ಮಾಡಿಸಿದ್ದು, ಆಕೆಗೂ ಕೊರೊನಾ ಪಾಸಿಟಿವ್ ಬಂದಿತ್ತು. ಆಗ ಪೊಲೀಸರು ಅವರು ವಾಸವಿದ್ದ ಏರಿಯಾವನ್ನು ಸೀಲ್‍ಡೌನ್ ಮಾಡಿದ್ದಾರೆ.

ಸೀಲ್‍ಡೌನ್ ವೇಳೆ ಅಕ್ಕಪಕ್ಕದ ಮನೆಯವರು ಮೃತ ನಾಗರಾಜ್ ಕುಟುಂಬಸ್ಥರನ್ನು ಅವಮಾನಿಸಿದ್ದರು. ನಿಮ್ಮಿಂದ ನಮಗೆಲ್ಕಾ ಸಮಸ್ಯೆ ಆಗುತ್ತಿದೆ. ಎಲ್ಲಾದರೂ ದೂರು ಹೋಗಿ ಎಂದು ಗಲಾಟೆ ಮಾಡಿದ್ದರಂತೆ. ಇದರಿಂದ ತೀವ್ರ ಬೇಸತ್ತ ನಾಗರಾಜ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love