ಅನ್ಲಾಕ್ 2.0: ಮಾರ್ಗಸೂಚಿ ಬದಲಾಯಿಸಿದ ಸರಕಾರ, ಬುಧವಾರದಿಂದ ಜಾರಿ

Spread the love

ಅನ್ಲಾಕ್ 2.0: ಮಾರ್ಗಸೂಚಿ ಬದಲಾಯಿಸಿದ ಸರಕಾರ, ಬುಧವಾರದಿಂದ ಜಾರಿ

ಬೆಂಗಳೂರು: ರಾಜ್ಯಾದ್ಯಂತ ಲಾಕ್ಡೌನ್ ತೆರವಾಗುವುದರ ಜೊತೆಗೆ ರಾತ್ರಿಯ ಕರ್ಪ್ಯೂ ಅವಧಿಯನ್ನು ಸರ್ಕಾರ ಇಳಿಕೆ ಮಾಡಿದೆ.

ಮಂಗಳವಾರ ರಾತ್ರಿ ಹೊಸ ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸಿದ್ದು, ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವೆರೆಗೆ ನೈಟ್ ಕರ್ಫ್ಯೂ ಇರಲಿದೆ. ಈ ಮೊದಲು ರಾತ್ರಿ 8 ಗಂಟೆಯಿಂದ ನೈಟ್ ಕರ್ಫ್ಯೂ ಆರಂಭವಾಗುತ್ತಿತ್ತು.

ಅನ್ಲಾಕ್ 2 ರ ಮಾರ್ಗಸೂಚಿಗಳ ಪೈಕಿ ಕೆಲ ಅಂಶಗಳನ್ನು ಬದಲಾವಣೆಗೊಳಿಸಿ ಸರ್ಕಾರ ಈಗ ಜಾರಿ ಮಾಡಲು ಮುಂದಾಗುತ್ತಿದೆ.

ಮಾರ್ಗಸೂಚಿಯಲ್ಲಿ ಏನಿದೆ?

  • ಈ ಹಿಂದೆ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂ ಮತ್ತೆ ಮುಂದುವರಿಯಲಿದೆ. ಆದರೆ 8 ಗಂಟೆಗಳ ಬದಲಾಗಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.
  •  ಈ ಹಿಂದೆ ಚಾಲ್ತಿಯಲ್ಲಿದ್ದಂತೆ ಭಾನುವಾರದ ಲಾಕ್ಡೌನ್ ಕೂಡ ಎಂದಿನಂತೆ ಮುಂದುವರಿಯಲಿದೆ.
  • ಜನಸಂದಣಿಯನ್ನು ತಡೆಗಟ್ಟುವ ಉದ್ದೇಶದಿಂದ ತರಕಾರಿ ಮಾರುಕಟ್ಟೆಗಳನ್ನು ಬೆಂಗಳೂರು ಮಾತ್ರವಲ್ಲದೆ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿಯೂ ಎಪಿಎಂಸಿ ಅಥವಾ ಸೂಕ್ತವಾದ ವಿಶಾಲ ಪ್ರದೇಶಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ.
  •  ಉದ್ಯಾನವನದಲ್ಲಿ ಜಿಮ್ ಸಲಕರಣೆಗಳು ಮತ್ತು ಕುಳಿತುಕೊಳ್ಳುವ ಬೆಂಚ್ನ ಬಳಕೆಯನ್ನು ನಿಷೇಧಿಸಲಾಗಿದೆ.
    ಜಿಲ್ಲಾಡಳಿತಗಳು ಪ್ರತ್ಯೇಕ ಮಾರ್ಗಸೂಚಿ ಹೊರಡಿಸದೇ ಇದ್ದಲ್ಲಿ, ಜುಲೈ 31ರವರೆಗೂ ಈ ನಿಯಮಗಳು ರಾಜ್ಯಾದ್ಯಂತ ಚಾಲ್ತಿಯಲ್ಲಿರಲಿವೆ ಎಂದು ಸರಕಾರ ತಿಳಿಸಿದೆ.

Spread the love