ಪರ್ಯಾಯ ಮಹೋತ್ಸವದ ಸುಗಮ ವಾಹನ ಸಂಚಾರಕ್ಕೆ ಡಿಜಿಟಲ್ ಟ್ರಾಫಿಕ್ ವ್ಯವಸ್ಥೆ

Spread the love

ಪರ್ಯಾಯ ಮಹೋತ್ಸವದ ಸುಗಮ ವಾಹನ ಸಂಚಾರಕ್ಕೆ ಡಿಜಿಟಲ್ ಟ್ರಾಫಿಕ್ ವ್ಯವಸ್ಥೆ

ಉಡುಪಿ: ಪುತ್ತಿಗೆ ಮಠದ ಪರ್ಯಾಯದ ಸಂದರ್ಭದಲ್ಲಿ ಬೇರೆ ಬೇರೆ ಕಡೆಗಳಿಂದ ಆಗಮಿಸುವ ಭಕ್ತಾದಿಗಳಿಗೆ ಹಾಗೂ ನಾಗರಿಕರಿಗೆ ಸುಗಮ ಸಂಚಾರ ಮತ್ತು ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಡಿಜಿಟಲ್ ಟ್ರಾಫಿಕ್ ಮತ್ತು ವಾಹನ ಪಾರ್ಕಿಂಗ್ ಮ್ಯಾನೇಜ್ ಮೆಂಟ್ ವ್ಯವಸ್ಥೆಯನ್ನು ಈ ಬಾರಿ ಪರಿಚಯಿಸಿದೆ.

ಹೊಸಡಿಜಿಟಲ್ ಟ್ರಾಫಿಕ್ ಮತ್ತು ವಾಹನ ಪಾರ್ಕಿಂಗ್ ಮ್ಯಾನೇಜ್ ಮೆಂಟ್ ವ್ಯವಸ್ಥೆಯಲ್ಲಿ ಪರ್ಯಾಯ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸಹಾಯವಾಗುವ ನಿಟ್ಟಿನಲ್ಲಿ ನಗರದ 25 ಕಡೆಗಳಲ್ಲಿ ಕ್ಯೂ ಆರ್ ಕೋಡ್ ಸ್ಯಾನರ್ ಗಳನ್ನು ಆಳವಡಿಸಲಾಗುತ್ತಿದ್ದು ಇದನ್ನು ಸ್ಕ್ಯಾನ್ ಮಾಡುವುದ ರಿಂದ ಭಕ್ತರು ಶ್ರೀಕೃಷ್ಣ ಮಠಕ್ಕೆ ತಲುಪುವ ವಿವರಗಳು ಹಾಗೂ ಪಾರ್ಕಿಂಗ್ ಸ್ಥಳದ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಪರ್ಯಾಯಕ್ಕೆ ಆಗಮಿಸುವ ಹೊರ ರಾಜ್ಯ ಮತ್ತು ಜಿಲ್ಲೆಗಳ ಭಕ್ತರಿಗೆ ಸರಿಯಾದ ಮಾಹಿತಿ ಇಲ್ಲದೆ ಒಳರಸ್ತೆಗಳಿಂದ ನಗರಕ್ಕೆ ಪ್ರವೇಶ ಪಡೆದಾಗ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ’ ಅರುಣ್ ಕೆ ಹೊಸ ಪ್ರಯೋಗವನ್ನು ಮಾಡಿದ್ದಾರೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ಹೊರರಾಜ್ಯ ಹಾಗೂ ಜಿಲ್ಲೆಗಳ ಭಕ್ತರು ನಿಗ ದಿತ ಪ್ರದೇಶಕ್ಕೆ ಸುಲಭವಾಗಿ ತಲುಪಬಹುದಾಗಿದೆ

ಇದಲ್ಲದೆ ಕ್ಯೂಆರ್ ಕೋಡ್ ಸ್ಕ್ಯಾನ್ ತಮ್ಮ ಮೊಬೈಲ್ಗಳಲ್ಲಿ ಸ್ಕ್ಯಾನ್ ಮಾಡಿದಾಗ ಪರ್ಯಾಯ ಮಹೋತ್ಸವ ಸಂಬಂಧ ಈಗಾಗಲೇ ನಿಗದಿಪಡಿಸಿದ ವಿವಿಐಪಿ ಪಾರ್ಕಿಂಗ್, ವಿಐಪಿ ಪಾರ್ಕಿಂಗ್, ಕಾರು, ದ್ವಿಚಕ್ರ ವಾಹನ ಪಾರ್ಕಿಂಗ್ ಮಾಹಿತಿಗಳು ಫೋಟೋ ಸಮೇತ ಪಡೆಯಬಹುದಾಗಿದೆ.

ಅಲ್ಲದೆ ನಗರದಲ್ಲಿನ ಪರ್ಯಾಯ ಮೆರವಣಿಗೆ ಮಾರ್ಗ, ಪೊಲೀಸ್ ಔಟ್ಪೋಸ್ಟ್, ಪೊಲೀಸ್ ಹೆಲ್ಪ್ಲೈನ್, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮೊಬೈಲ್ ಟಾಯ್ಲೆಟ್ಗಳು, ಸಾರ್ವಜನಿಕರಿಗೆ ಕಳ್ಳರ ಬಗ್ಗೆ ಎಚ್ಚರಿಕೆ ಕೊಡುವ ಪೊಲೀಸ್ ನೋಟೀಸ್ ಅಳವಡಿಸಿರುವ ಸ್ಥಳಗಳು, ಬ್ಯಾರಿಕೇಡ್ ಅಳವಡಿಸಿರುವ ಸ್ಥಳಗಳ ಸಂಪೂರ್ಣ ಮಾಹಿತಿ ಈ ವ್ಯವಸ್ಥೆಯಿಂದ ಪಡೆಯಬಹುದಾಗಿದೆ.

ಪರ್ಯಾಯ ಮಹೋತ್ಸವಕ್ಕೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆಯನ್ನು ಮಾಡಿದ್ದು ಇರಿಸಲು ಉಡುಪಿ, ದ.ಕ., ಚಿಕ್ಕಮಗಳೂರು, ಉತ್ತರಕನ್ನಡ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಜಿಲ್ಲೆಯ 4 ಮಂದಿ ಹಾಗೂ ಹೊರಜಿಲ್ಲೆಯ 5 ಮಂದಿ ಡಿವೈಎಸ್ಪಿಗಳು, ಜಿಲ್ಲೆಯ 10 ಹಾಗೂ ಹೊರಜಿಲ್ಲೆಯ 12 ಮಂದಿ ಪೊಲೀಸ್ ನಿರೀಕ್ಷಕರು, ಜಿಲ್ಲೆಯ 40 ಹಾಗೂ ಹೊರಜಿಲ್ಲೆಯ 25 ಮಂದಿ ಉಪನಿರೀಕ್ಷಕರು, ಜಿಲ್ಲೆಯ 550 ಹಾಗೂ ಹೊರಜಿಲ್ಲೆಯ 400 ಮಂದಿ ಸಿಬಂದಿ, ಎರಡು ಕೆಎಸ್ಆರ್ಪಿ, 10 ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಗಳನ್ನು ನಿಯೋಜಿಸಲಾಗಿದೆ

ಡಿಜಿಟಲ್ ಟ್ರಾಫಿಕ್ ವ್ಯವಸ್ಥೆ ವಿವರಗಳಿಗೆ ಕ್ಲಿಕ್ ಮಾಡಿ


Spread the love