ಪಲ್ಟಿಯಾಗಿ ಧಗಧಗನೆ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್- 5ಕ್ಕೂ ಹೆಚ್ಚು ಮನೆಗಳು ಭಸ್ಮ

Spread the love

ಪಲ್ಟಿಯಾಗಿ ಧಗಧಗನೆ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್- 5ಕ್ಕೂ ಹೆಚ್ಚು ಮನೆಗಳು ಭಸ್ಮ

ಚಿಕ್ಕಮಗಳೂರು: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ 5ಕ್ಕೂ ಹೆಚ್ಚು ಮನೆಗಳು ಧಗಧಗನೆ ಹೊತ್ತಿ ಉರಿದು ಘಟನೆ ಚಿಕ್ಕಮಗಳೂರು ಕಡೂರು ತಾಲೂಕು ಗಿರಿಯಾಪುರ ಗ್ರಾಮದಲ್ಲಿ ನಡೆದಿದೆ.

ಕಡೂರಿನಿಂದ ಹೊಸದುರ್ಗ ಕಡೆಗೆ ಪೆಟ್ರೋಲ್ ಟ್ಯಾಂಕರ್ ಹೋಗುತ್ತಿತ್ತು. ಈ ವೇಳೆ ಲಾರಿ ಪಕ್ಕದಲ್ಲೇ ಬೈಕ್ ಬಂದಿದ್ದು, ಅಪಘಾತ ತಡೆಯಲು ಹೋಗಿ ಲಾರಿ ಪಲ್ಟಿ ಆಗಿದೆ. ಬೈಕ್ ಮೇಲೆ ಪೆಟ್ರೋಲ್ ಟ್ಯಾಂಕರ್ ಬಿದ್ದಿದೆ.

ಬೈಕಿನ ಮೇಲೆ ಬಿದ್ದ ಬಳಿಕ ಟ್ಯಾಂಕರ್ ಹೊತ್ತಿ ಉರಿದಿದೆ. ಹೊತ್ತು ಉರಿಯುತ್ತಿದ್ದಂತೆ ಕ್ಲೀನರ್ ಸ್ಥಳದಲ್ಲೇ ಸಜೀವ ದಹನವಾಗಿದ್ದರೆ. ಚಾಲಕ ಮೈತುಂಬಾ ಬೆಂಕಿ ಮೆತ್ತಿಕೊಂಡೇ ಓಡಿ ಬಂದಿದ್ದಾನೆ. ಸ್ಥಳೀಯರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


Spread the love