ಪವರ್ ಟಿವಿ ಪ್ರಸಾರ ತಡೆ ಖಂಡಿಸಿ ದಕ ಜಿಲ್ಲಾ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಖಂಡನೆ

Spread the love

ಪವರ್ ಟಿವಿ ಪ್ರಸಾರ ತಡೆ ಖಂಡಿಸಿ ದಕ ಜಿಲ್ಲಾ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಖಂಡನೆ

ಮಂಗಳೂರು: ಕನ್ನಡ ಟಿವಿ ಸುದ್ದಿ ವಾಹಿನಿ ಪವರ್ ಟಿವಿ ಪ್ರಸಾರವನ್ನು ತಡೆ ಹಿಡಿದಿರುವ ರಾಜ್ಯ ಸರಕಾರದ ವರ್ತನೆಯ ವಿರುದ್ದ ದಕ್ಷಿಣ ಕನ್ನಡ ಜಿಲ್ಲಾ ಜರ್ನಲಿಸ್ಟ್ ಎಸೋಸಿಯೇಶನ್ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಕನ್ನಡ ಟಿವಿ ಸುದ್ದಿ ವಾಹಿನಿ ಪವರ್ ಟಿವಿ ಪ್ರಸಾರವನ್ನು ತಡೆ ಹಿಡಿದಿರುವುದನ್ನು ತೀವ್ರವಾಗಿ ಖಂಡಿಸುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ತಕರಾರುಗಳಿಗೆ ನ್ಯಾಯಾಲಯದ ಮೂಲಕ ಪರಿಹಾರ ಕೇಳುವುದು ಧರ್ಮ.

ಆದರೆ ಬಿಜೆಪಿ ಸರಕಾರವು ಏಕಪಕ್ಷೀಯವಾಗಿ ಪವರ್ ಟಿವಿ ಪ್ರಸಾರವನ್ನು ತಡೆಹಿಡಿದಿರುವುದು ಪ್ರಜಾಪ್ರಭುತ್ವದ ಮೌಲ್ಯ ಮತ್ತು ಆಶಯಕ್ಕೆ ಮಾಡಿರುವ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ಮಾಧ್ಯಮಗಳ ಕತ್ತು ಹಿಸುಕುವ ಕೆಲಸ ನಡೆದಿತ್ತು, ಆತಂಕ ದಿನಗಳಲ್ಲಿ ತುರ್ತು ಪರಿಸ್ಥಿಯನ್ನು ವಿರೋಧಿಸಿ ಹೋರಾಟ ಮಾಡಿದವರು ನಮ್ಮ ಪಕ್ಷದವರು ಎಂದು ಹೇಳಿಕೊಳ್ಳುವ ಬಿಜೆಪಿಯವರು ಇದೀಗ ಅಧಿಕಾರ ಸ್ಥಾನದಲ್ಲಿ ಇರುವ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಸ್ವರೂಪದಂತೆ ಮಾಧ್ಯಮ ಕತ್ತು ಹಿಸುಕುವುದು ಖಂಡನೀಯ ಈ ತಕ್ಷಣವೇ ಪವರ್ ಟಿವಿ ವಾಹಿನಿಯ ಪ್ರಸಾರಕ್ಕೆ ಅಡ್ಡಿ ಪಡಿಸುವಂತಹ ನಿಲುವಿನಿಂದ ಹೊರ ಬಂದು ಪ್ರಸಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ..


Spread the love