ಪಶ್ಚಿಮ ಬಂಗಾಳದ ಮೂಲದ ಮಹಿಳೆ ನಾಪತ್ತೆ : ಪತ್ತೆಗೆ ಮನವಿ

Spread the love

ಪಶ್ಚಿಮ ಬಂಗಾಳದ ಮೂಲದ ಮಹಿಳೆ ನಾಪತ್ತೆ ಪತ್ತೆಗೆ ಮನವಿ

ಮಂಗಳೂರು: ಪಶ್ಚಿಮ ಬಂಗಾಳದ ಮೂಲದ ಹಸೀನಾ ಖತೂನ್ (21) ಎಂಬವರು ಜೋಕಟ್ಟೆ ಹಳೇ ಮಸೀದಿ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮೇ 29 ರಂದು ಕಾಣೆಯಾಗಿದ್ದಾರೆ. ಈ ಬಗ್ಗೆ ಪಣಂಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರ ಚಹರೆ: ಎತ್ತರ ಸುಮಾರು 5 ಅಡಿ 2 ಇಂಚು, ಸಾಧಾರಣ ಶರೀರ, ಬಿಳಿ ಮೈ ಬಣ್ಣ, ದುಂಡು ಮುಖ, ಎಡ ತುಟಿಯ ಕೆಳಗಡೆ ಕಪ್ಪು ಎಳ್ಳು ಮಚ್ಚೆ ಇರುತ್ತದೆ. ಕಾಣೆಯಾದ ದಿನ ಕಪ್ಪು ಬಣ್ಣದ ಜೀನ್ಸ್ ಮತ್ತು ಕೆಂಪು ಬಣ್ಣದ ಟಾಪ್ ಧರಿಸಿದ್ದರು. ಬಂಗಾಳಿ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.

ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಪಣಂಬೂರು ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments