ಪಾಂಡೇಶ್ವರ, ಬಿ. ಆರ್ ಕರ್ಕೇರ ಕಾಲೋನಿಯಲ್ಲಿ ಎಮ್ ಎಲ್ ಸಿ ಐವನ್ ಡಿ ಸೋಜಾ ರವರಿಂದ ಅಕ್ಕಿ ವಿತರಣೆ 

Spread the love

ಪಾಂಡೇಶ್ವರ, ಬಿ. ಆರ್ ಕರ್ಕೇರ ಕಾಲೋನಿಯಲ್ಲಿ ಎಮ್ ಎಲ್ ಸಿ ಐವನ್ ಡಿ ಸೋಜಾ ರವರಿಂದ ಅಕ್ಕಿ ವಿತರಣೆ  

ಮಂಗಳೂರು: ಡಾ. ಬಿ. ಆರ್. ಅಂಬೇಡ್ಕರ್ ರವರ 129ನೇ ಜಯಂತಿ ಆಚರಣೆಯನ್ನು ನೆರವೇರಿಸಿ ಕಾಲೋನಿಯಲ್ಲಿ ವಾಸವಾಗಿರುವ ಸುಮಾರು 40 ಕುಟುಂಬಗಳಿಗೆ ಅಕ್ಕಿ, ದಿನಸಿ ವಸ್ತುಗಳನ್ನು ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ರವರು ವಿತರಿಸಿದರು.

ಡಾ. ಬಿ. ಆರ್.ಅಂಬೇಡ್ಕರ್ ರವರ ನೆನಪು ಅಂದು ಇಂದು ಮತ್ತು ಸವ೯ಕಾಲಿಕವಾದ್ದು ಎಂದು ತಿಳಿಸಿದರು. ದೇಶದಲ್ಲಿ ಸಮಾನತೆ, ವಿಶ್ವಾಸದ ಅರಿವನ್ನು ಮೂಡಿಸಿದರು. ಡಾ. ಬಿ. ಆರ್. ಅಂಬೇಡ್ಕರ್ ರವರು ಎಂದರು

ಈ ಸಂದರ್ಭದಲ್ಲಿ ಅಂಬೇಡ್ಕರ್ ರವರ ಬಾವ ಚಿತ್ರಕ್ಕೆ ಹೂ ಹಾರ ಅಪಿ೯ಸಿದ   ಐವನ್ ಡಿ ಸೋಜಾ ರವರು ದೇಶಕ್ಕಾಗಿ ನಾವೆಲ್ಲರೂ ತ್ಯಾಗ ಮಾಡಬೇಕಾಗಿ ಬಂದಿದೆ. ಇನ್ನೂ 19 ದಿನಗಳ ಕಾಲ ನಮ್ಮನ್ನು ನಾವು ಬಂಧನದಲ್ಲಿರಿಸಬೇಕಾಗಿದೆ. ಇದು ದೇಶದ ಸವ೯ ಜನರ ಹಿತಕ್ಕಾಗಿ ಎಂದರು. . ಈ ಸಂದರ್ಭದಲ್ಲಿ ಸ್ಥಳೀಯ ನಾಯಕರಾದ ಸಂಜೀವ ಪಾಂಡೇಶ್ವರ, ಚಿನ್ನಮ್ಮ, ಅಲಿಸ್ಟನ್ , ಬಜಿಲ್ ಅಬ್ಬಿಬುಲ್ಲಾ ಮುಂತಾದವರು ಉಪಸ್ಥಿತರಿದ್ದರು.


Spread the love