ಪಾದರಾಯನಪುರದಲ್ಲಿ ಗರುಡ ಭದ್ರತೆ: ಗಲ್ಲಿ ಗಲ್ಲಿಗಳಲ್ಲಿ ಕಮಾಂಡೋಗಳ ಗಸ್ತು!

Spread the love

ಪಾದರಾಯನಪುರದಲ್ಲಿ ಗರುಡ ಭದ್ರತೆ: ಗಲ್ಲಿ ಗಲ್ಲಿಗಳಲ್ಲಿ ಕಮಾಂಡೋಗಳ ಗಸ್ತು!

ಬೆಂಗಳೂರು: ಪಾದರಾಯನಪುರ ದಲ್ಲಿ ಭಾನುವಾರ ರಾತ್ರಿ ವೈದ್ಯಕೀಯ ಸಿಬ್ಬಂದಿ, ಆಶಾ‌ ಕಾರ್ಯಕರ್ತೆಯರು ಹಾಗೂ ಪೊಲೀಸರು ಮೇಲೆ ಹಲ್ಲೆ ನಡೆದ ಘಟನೆಯ ಬಳಿಕ ಪಾದರಾಯನಪುರದಲ್ಲಿ ಗರುಡ ತಂಡ ಭದ್ರತೆ ಕೈಗೊಂಡಿದ್ದು, ಇಡೀ ಪ್ರದೇಶ ಸಂಪೂರ್ಣ ಸೀಲ್‌ಡೌನ್ ಆಗಿದೆ.

ರೈಫಲ್ ಹಿಡಿದುಕೊಂಡು ಗರುಡ ಕಮಾಂಡೋಗಳು ನಡು ರಸ್ತೆಯಲ್ಲಿ ನಿಂತು ನಿಗಾ ವಹಿಸುತ್ತಿದ್ದಾರೆ. ಮಾಸ್ಕ್ ಹಾಕದೆ, ಹೊರಗಡೆ ಓಡಾಡುವ ಜನರಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಗರುಡ ಟೀಮ್ ನೋಡಿ ಜನ ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.

ಇತ್ತ ಪೊಲೀಸರು ಕೂಡ ಪ್ರತಿ ಏರಿಯಾದಲ್ಲೂ ಗಸ್ತು ತಿರುಗುತ್ತಿದ್ದಾರೆ. ಬೈಕ್‍ಗಳಲ್ಲಿ, ಜೀಪ್‍ನಲ್ಲಿ ಪೊಲೀಸರು ಸುತ್ತಾಡುತ್ತಿದ್ದಾರೆ. ಪ್ರತಿ ಗಲ್ಲಿ ಗಲ್ಲಿಗೂ ಪೊಲೀಸ್ ಸರ್ಪಗಾವಲು ಇರಿಸಲಾಗಿದ್ದು ಪಾದರಾಯನಪುರ ಸಂಪೂರ್ಣ ಖಾಕಿಮಯವಾಗಿದೆ.


Spread the love