ಪಾದಾಚಾರಿಗೆ ಓಮ್ನಿ ಢಿಕ್ಕಿ, ಸ್ಥಳದಲ್ಲೇ ಸಾವು

Spread the love

ಪಾದಾಚಾರಿಗೆ ಓಮ್ನಿ ಢಿಕ್ಕಿ, ಸ್ಥಳದಲ್ಲೇ ಸಾವು

ಕುಂದಾಪುರ: ವೇಗವಾಗಿ ಧಾವಿಸುತ್ತಿದ್ದ ಓಮ್ನಿ ಕಾರೊಂದು ಪಾದಾಚಾರಿಯೋರ್ವರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಕೋಟದಲ್ಲಿ ವರದಿಯಾಗಿದೆ.

ತಾಲೂಕಿನ ಗುಲ್ವಾಡಿ ನಿವಾಸಿ ಇಸ್ಮಾಯಿಲ್(55) ಅಪಘಾತ ಸಾವನ್ನಪ್ಪಿದ ವ್ಯಕ್ತಿ.

ಖಾಸಗಿ ಬಸ್ ಒಂದರಲ್ಲಿ ನಿರ್ವಾಹಕ ವೃತ್ತಿ ನಿರ್ವಹಿಸುತ್ತಿರುವ ಇಸ್ಮಾಯಿಲ್ ಮಧ್ಯಾಹ್ನ ಊಟದ ವಿರಾಮದಲ್ಲಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಮಧ್ಯಾಹ್ನ ರಸ್ತೆ ದಾಟುತ್ತಿದ್ದ ವೇಳೆ ಉಡುಪಿಯಿಂದ ಶರವೇಗದಲ್ಲಿ ಧಾವಿಸುತ್ತಿದ್ದ ಓಮ್ನಿ ಇಸ್ಮಾಯಿಲ್ ಅವರಿಗೆ ಢಿಕ್ಕಿ ಹೊಡೆದಿತ್ತು.

ಢಿಕ್ಕಿಯ ತೀವ್ರತೆಗೆ ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.


Spread the love