ಪಾದೂರು ಕಚ್ಚಾತೈಲ ಸಂಗ್ರಹ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ : ವಿಶ್ವಾಸ್ ಅಮೀನ್

Spread the love

ಪಾದೂರು ಕಚ್ಚಾತೈಲ ಸಂಗ್ರಹ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ : ವಿಶ್ವಾಸ್ ಅಮೀನ್

ಉಡುಪಿ: ಪಾದೂರು ಕಚ್ಚಾತೈಲ ಸಂಗ್ರಹ ಘಟಕದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದೆ ಗುಜರಾತಿನವರಿಗೆ ಉದ್ಯೋಗ ನೀಡುವುದನ್ನು ಈ ಕೂಡಲೇ ನಿಲ್ಲಸಬೇಕು ಮತ್ತು ಈ ಕುರಿತು ಪೆಟ್ರೋಲಿಯಂ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಮಧ್ಯಪ್ರವೇಶಿಸಿ ಸ್ಥಳೀಯರ ಸಮಸ್ಯೆಗಳ ಬಗ್ಗೆ ಗಮನ ಹರಿಸದೇ ಹೋದಲ್ಲಿ ಬೃಹತ್ ಪ್ರತಿಭಟನೆಯನ್ನು ಎದುರಿಸಬೇಕಾದಿತು ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಡುಪಿ ಜಿಲ್ಲೆಯು ಕಳೆದ 10 ವರ್ಷಗಳಿಂದ ಸದ್ದಿಲ್ಲದೆ ಬೃಹತ್ ಕಾರ್ಖಾನೆಗಳಿಂದ ತುಂಬಿಕೊಳ್ಳುತ್ತಿದ್ದು ದೇಶದ ಭದ್ರತೆ ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆಯ ಒಂದು ಅಂಗವಾಗಿ ಕಚ್ಚಾ ತೈಲ ಶೇಖರಣಾ ಯೋಜನೆಯ ನಿಮಿತ್ತ ಕಾಪು ತಾಲೂಕಿನ ಪಾದೂರು ಬಳಿ ಸುಮಾರು 5 ವರ್ಷಗಳಿಂದ ಐಎಸ್ ಪಿ ಆರ್ ಎಲ್ ಘಟಕ ಕಾರ್ಯಚರಿಸುತ್ತಿದೆ. ಈ ಯೋಜನೆ ಅಸ್ತಿತ್ವಕ್ಕೆ ತರಲು ಈ ಭಾಗದ ಹಲವಾರು ಕುಟುಂಬಗಳು ತಮ್ಮ ಜಾಗವನ್ನು ಕಳೆದುಕೊಂಡಿರುವುದಲ್ಲದೆ ಕೃಷಿ ಭೂಮಿ ಸಂಪತ್ತು ಮತ್ತುಷ್ಟು ಬಡವಾಗಬೇಕಾಯಿತು. ಆದರೆ ಇಲ್ಲಿನ ಜನರ ದೇಶಭಾನಿಮಾದ ಕಾರಣ ರಾಷ್ಟ್ರೀಯ ವಿಪತ್ತು ನಿರ್ವಹಣೆಗೆ ಪೂರಕವಾದ ಈ ಯೋಜನೆಗೆ ದೇಶದ ಹಿತ ಕಾಪಾಡಿಕೊಳ್ಳುವ ಒಂದೇ ಒಂದು ಉದ್ದೇಶದಿಂದ ಯಾವುದೇ ವಿರೋಧ ಅಥವಾ ತಕಾರಾರು ವ್ಯಕ್ತಪಡಿಸಲಿಲ್ಲ.

ಐಎಸ್ ಪಿ ಆರ್ ಎಲ್ ಘಟಕ ತನ್ನ ಕಾಮಗಾರಿಗಳನ್ನು ಮುಗಿಸಿ ನಿರ್ವಹಣ ಹಂತಾ ತಲುಪಿದ್ದು ಎರಡನೇ ಘಟಕ ನಿರ್ಮಾಣಕ್ಕೆ ಮುಂದಾಗುತ್ತಿದೆ. ದೇಶದ ಹಿತಕ್ಕಾಗಿ ಯಾವುದೇ ವಿರೋಧ ವ್ಯಕ್ತಪಡಿಸದ ಜನರನ್ನು ಮಾತ್ರ ಐಎಸ್ ಪಿ ಆರ್ ಎಲ್ ಘಟಕ ಸಂಪೂರ್ಣ ಕಡೆಗಣಿಸುತ್ತಿದೆ. ಜಿಲ್ಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಲಭಿಸದೆ ಯುವ ಪ್ರತಿಭೆಗಳು ಬೇರೆ ರಾಜ್ಯಗಳಿಗೆ ತೆರಳುವ ಪರಿಸ್ಥಿತಿ ಉಂಟಾಗಿದೆ. ಉದ್ದಿಮೆಗಳ ಮಟ್ಟದಲ್ಲೂ ಕೂಡ ಇಲ್ಲಿ ಕಾಂಟ್ರಾಕ್ಟ್, ಟೆಂಡರ್ ಗಳೆಲ್ಲಾ ಪರರಾಜ್ಯಗಳ ಪಾಲಾಗುತ್ತಿದೆ. ಪಾದೂರು ಐಎಸ್ ಪಿ ಆರ್ ಎಲ್ ಘಟಕದಲ್ಲಿ ಗುಜರಾತ್ ಸೇರಿದಂತೆ ಉತ್ತರ ಭಾರತದ ಮುಖಗಳು ತುಂಬಿಕೊಳ್ಳುತ್ತಿದೆ. ಸ್ಥಳೀಯ ಜನರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಐಎಸ್ ಪಿ ಆರ್ ಎಲ್ ಘಟಕ ಯಾವುದೇ ಮಟ್ಟದ ಪ್ರಯತ್ನ ಮಾಡುತ್ತಿಲ್ಲ. ಒಂದರ್ಥದಲ್ಲಿ ನಮ್ಮ ನೆಲದಲ್ಲಿ ಗುಜರಾತ್ ಸಾಮ್ರಾಜ್ಯ ಸ್ಥಾಪಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುದ್ದ ರೀತ್ಯ ಸಂದರ್ಭದಲ್ಲಿ ಅಪತ್ಕಾಲೀನ ಪರಿಸ್ಥಿತಿ ನಿರ್ವಹಣೆಗೆ ಕ್ರೂಡ್ ಆಯಿಲ್ ಸಂಗ್ರಹ ಘಟಕವನ್ನು ನಿರ್ಮಿಸುತ್ತಿರುವುದೆಂದು ಬುದ್ದಿವಂತರ ಜಿಲ್ಲೆಗೆ ಪರದೆ ಎಳೆದಿರುವ ಕೇಂದ್ರ ಸರಕಾರ 2018 ರ ನವೆಂಬರ್ ತಿಂಗಳಲ್ಲಿ ಅರ್ದದಷಷ್ಟಟು ಪಾದೂರು ತೈಲ ಸಂಗ್ರಹವನ್ನು ಅಬುದಾಬಿ ನ್ಯಾಷನಲ್ ಆಯಿಲ್ ಕಂಪೆನಿಗೆ ಗುತ್ತಿಗೆ ನೀಡಿರುವುದನ್ನು ಮಾತ್ರ ಸ್ಥಳೀಯ ಮಟ್ಟದಲ್ಲಿ ಬಿಂಬಿಸಿಕೊಳ್ಳುತ್ತಿಲ್ಲ ೀ ಕಂಪೆನಿಗೆ ಇಲ್ಲಿ ಕಚ್ಚಾ ತೈಲವನ್ನು ಸ್ಥಳೀಯ ರಿಫೈನರಿಗಳಿಗೆ ಮಾರುವ ಅಧಿಖಾರ ಕೂಡ ಇದೆ ಎನ್ನವುದು ಕೂಡ ಪ್ರಚಾರ ಮಾಡಿಲ್ಲ. ಕರಾವಳಿಯ ನೆಲದಲ್ಲಿ ಅಸ್ತಿತ್ವ ಪಡೆದುಕೊಂಡಿರುವ ಕಂಪೆನಿಯಲ್ಲಿ ಕರಾವಳಿಗರಿಗೆ ಯಾಕೆ ಪ್ರಾಶಸ್ತ್ಯ ಇಲ್ಲ ಯಾಕೆ ಮಾನ್ಯತೆ ಇಲ್ಲ ಯಾಕೆ ಉದ್ಯೋಗಗಳಿಲ್ಲ ಎಂಬ ಪ್ರಶ್ನೆಗಳಿಗೆ ಕೇಂದ್ರ ಸರಕಾರ ಉತ್ತರಿಸಬೇಕಾಗಿದೆ.

ಪಾದೂರು ಐಎಸ್ ಪಿ ಆರ್ ಎಲ್ ಘಟಕದಲ್ಲಿ ಹಿರಿಯ ಅಧಿಕಾರಿಗಳು ತಮ್ಮ ಕುಟುಂಬಸ್ಥರನ್ನು ತಮ್ಮ ಊರವರನ್ನೆಲ್ಲಾ ತಂದು ಇಲ್ಲಿ ಉದ್ಯೋಗ ನೀಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಇತ್ತೀಚೆಗೆ ನಿರ್ವಹಣಾ ಕಾಂಟ್ರಾಕ್ಟ್ ಗಳಂತಹ ವ್ಯಾವಾಹಾರಿಕ ಅವಕಾಶ ಕೂಡ ಉತ್ತರ ಭಾರತೀಯರಿಗೆ ನೀಡಲಾಗಿದ್ದು ಇದರಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಅಬುದಾಬಿ ಕಂಪೆನಿಗಳಿಗೆ ಗುತ್ತಿಗೆ ನೀಡುವಂತಿದ್ದರೆ ಕಂಪೆನಿಯ ಸಿಎಸ್ ಆರ್ ನಿಧಿಯನ್ನು ಜಿಲ್ಲೆಯ ವಿವಿಧ ರಂಗದ ಅಭಿವೃದ್ಧಿಗೆ ವಿನಿಯೋಗಿಸಬೇಕು. ಸ್ಥಳೀಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಜವಾಬ್ದಾರಿ ಸೇರಿದಂಥೆ ಸ್ಥಳೀಯ ಗ್ರಾಮಗಳ ಸರ್ವತೋಮುಕ ಅಭಿವೃದ್ಧಿಗೆ ಚಾಲನೇ ನೀಡಬೇಕು. ಐಎಸ್ ಪಿ ಆರ್ ಎಲ್ ಘಟಕ, ಪೆಟ್ರೋಲಿಯಂ ಇಲಾಖೆ ಮತ್ತು ಕೇಂದ್ರ ಸರಕಾರ ಈ ಬಗ್ಗೆ ಗಮನ ಹರಿಸಿ ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಈ ವಿಚಾರಕ್ಕೆ ಗಮನ ಕೊಡದಿದ್ದಲ್ಲಿ ಬೃಹತ್ ಪ್ರತಿಭಟನೆ ಮಾಡಬೇಕಾದೀತು ಎಂದರು ಎಚ್ಚಿರಿಸಿದರು ಅಲ್ಲದೆ ಪಾದೂರು ಘಟಕದ ಎರಡನೇ ಹಂತದ ವಿಸ್ತರಣೆಗೆ ಕೂಡ ವೀರೋಧ ವ್ಯಕ್ತಪಡಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜಾ, ಉಡುಪಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸೋಶಿಯಲ್ ಮೀಡಿಯ ಸಂಯೋಜಕರಾದ ಜೊಯೇಲ್ ಮಥಾಯಸ್ ಉಪಸ್ಥಿತರಿದ್ದರು.


Spread the love