ಪುತ್ತೂರು : ಬಸ್ಸಿಗೆ ಕಲ್ಲು ತೂರಾಟ – ಐವರ ಬಂಧನ

ಪುತ್ತೂರು : ಬಸ್ಸಿಗೆ ಕಲ್ಲು ತೂರಾಟ – ಐವರ ಬಂಧನ

ಮಂಗಳೂರು: ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ ಸಮಯದಲ್ಲಿ ಕಿಡಿಗೇಡಿಗಳು ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸಿಧ್ದೀಕ್ (33 ವರ್ಷ),   ಕೆ ಹಂಝ  (38 ವರ್ಷ),  ಅಭೀಬ್ ಫೈಸಲ್ ( 29 ವರ್ಷ)  ಅಬ್ದುಲ್  ಸಮೀರ್ (30ವರ್ಷ) ಹಾಗೂ ಪುತ್ತೂರು ಕೊಡಿಪ್ಪಾಡಿ ನಿವಾಸಿ  5.ಇಸ್ಮಾಯಿಲ್ (23ವರ್ಷ) ಎಂದು ಗುರುತಿಸಲಾಗಿದೆ.

ಸೋಮವಾರ   ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ  ಕಬಕ ಗ್ರಾಮದ ಪೋಳ್ಯ  ಖಾಸಗೀ ಬಸ್ ಮತ್ತು   ಕಾರಿನ ಮಧ್ಯೆ ಅಫಘಾತ ಸಂಭವಿಸಿದ್ದು ಈ ಅಫಘಾತದಲ್ಲಿ ಕಾರು ಚಾಲಕ ಅಬ್ದುಲ್‌ ಹಕೀಂ ಎಂಬವರು ಮೃತಪಟ್ಟಿರುತ್ತಾರೆ. ಇದರಿಂದ ಕೋಪಗೊಂಡ ಆರೋಪಿಗಳು  ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದು ಅದರ ಪರಿಣಾಮ ಬಸ್ಸಿನ ಹಿಂದಿನ ಮುಂದಿನ ಹಾಗೂ ಎರಡೂ ಬದಿಯ ಎಲ್ಲಾ ಗ್ಲಾಸ್ ಗಳನ್ನು ಪುಡಿ ಮಾಡಿರುತ್ತಾರೆ   ಹಾಗೂ ಬಸ್ ನ ಬಾಡಿಯನ್ನು ಹಾನಿಗೊಳಿಸಿರುತ್ತಾರೆ. ಇದರಿಂದ ಬಸ್ಸಿಗೆ   ಅಂದಾಜು 60,000/- ರೂ ಮೌಲ್ಯದ ನಷ್ಟ ಉಂಟಾಗಿರುತ್ತದೆ.

ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.