ಪುತ್ತೂರು : ಮಾರಕಾಸ್ತ್ರದಿಂದ ಹಲ್ಲೆ; ಬಾಲಕಿ ಸೇರಿ ಇಬ್ಬರು ಮೃತ್ಯು, ಮಹಿಳೆ ಗಂಭೀರ

ಪುತ್ತೂರು : ಮಾರಕಾಸ್ತ್ರದಿಂದ ಹಲ್ಲೆ; ಬಾಲಕಿ ಸೇರಿ ಇಬ್ಬರು ಮೃತ್ಯು, ಮಹಿಳೆ ಗಂಭೀರ

ಪುತ್ತೂರು : ಇಲ್ಲಿನ ಕುರಿಯ ಗ್ರಾಮದ ಹೊಸ್ಮಾರು ಎಂಬಲ್ಲಿ ಸೋಮವಾರ ತಡರಾತ್ರಿ ವೇಳೆ ದುಷ್ಕರ್ಮಿಗಳು ಮೂವರ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆಸಿದ್ದು, ಈ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೊಸ್ಮಾರು ನಿವಾಸಿ ಕೊಗ್ಗು ಸಾಹೇಬ್ (62) ಹಾಗು ಅವರ ಮೊಮ್ಮಗಳು ಸಮೀಹಾ (16) ಮೃತರು. ಕೊಗ್ಗು ಸಾಹೇಬ್ ಅವರ ಪತ್ನಿ ಖತೀಜಮ್ಮ (55) ಗಂಭೀರ ಗಾಯಗಳೊಂದಿಗೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸೋಮವಾರ ರಾತ್ರಿ ವೇಳೆ ಮನೆಯಲ್ಲಿದ್ದ ಮೂವರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

  Subscribe  
Notify of