ಪುತ್ತೂರು: ಶಾಸಕಿ ಶಕುಂತಳಾ ಶೆಟ್ಟಿ ತಮ್ಮನ ಮಗಳ ಶಾಲು ಯಂತ್ರಕ್ಕೆ ಸಿಲುಕಿ ಸಾವು

Spread the love

ಪುತ್ತೂರು: ಚೂಡಿದಾರದ ಶಾಲು ಯಂತ್ರಕ್ಕೆ ಸಿಲುಕಿದ ಪರಿಣಾಮ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿಯವರ ಸಂಬಂಧಿ ಮೃತಪಟ್ಟ ಘಟನೆ ಚೆನ್ನೈನಲ್ಲಿ ಮಂಗವಾರ ನಡೆದಿದೆ

ಮೃತಪಟ್ಟವರನ್ನು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿಯವರ ಸಹೋದರ ಗೋಪಾಲಕೃಷ್ಣ ಅಡ್ಯಂತಾಯ ಅವರ ಪುತ್ರಿ ಇಂಜಿನಿಯರಿಂಗ್ ಪದವಿಧರೆ ನಿರೀಕ್ಷಾ ಅಡ್ಯಂತ್ಯಾಯ (20) ಎಂದು ಗುರುತಿಸಲಾಗಿದೆ.

ಚೆನ್ನೈನಲ್ಲಿ ಸ್ವಂತ ಬಟ್ಟೆ ಉದ್ಯಮ ನಡೆಸುತ್ತಿದ್ದ ಗೋಪಾಲಕೃಷ್ಣ ಅಡ್ಯಂತಾಯ, ಮಂಗಳವಾರ ನಿರೀಕ್ಷಾ ಯಂತ್ರ ಚಾಲೂ ಮಾಡುವ ವೇಳೆ ಚೂಡಿದಾರದ ಶಾಲು ಯಂತ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲಿ ಸಾವನ್ನಪ್ಪದರು ಎನ್ನಲಾಗಿದೆ.  ಕಳೆದ ವಾರವಷ್ಟೇ ರಿಶಿಕ ಕುಟುಂಬ ಪುತ್ತೂರಿಗೆ ಆಗಮಿಸಿದ್ದು, ರಜಾ ದಿನಗಳಗಲ್ಲಿ ತಂದೆಗೆ ಸಹಾಯ ಮಾಡಲು ತೆರಳುತ್ತಿದ್ದರು. ಮೃತದೇಹವನ್ನು ಬುಧವಾರ ಹುಟ್ಟೂರಾದ ಪುತ್ತೂರಿನ ಅಲಂಕಾರಿಗೆ ತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.


Spread the love