ಪುತ್ತೂರು: MDMA ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿ ಬಂಧನ; 14 ಗ್ರಾಂ ಮಾದಕ ವಸ್ತು ವಶ
ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದಲ್ಲಿರುವ ಬಾಡಿಗೆ ಮನೆಯಲ್ಲಿ MDMA ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, 14 ಗ್ರಾಂ ನಿಷೇಧಿತ ಮಾದಕ ಮನೋನ್ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಉಪನಿರೀಕ್ಷಕ ಜನಾರ್ಧನ ಕೆ.ಎಂ ಅವರ ನೇತೃತ್ವದ ಪುತ್ತೂರು ನಗರ ಪೊಲೀಸ್ ತಂಡವು ಮುಕ್ರಂಪಾಡಿ ಕಮ್ಮಾಡಿ ಮರದ ಮಿಲ್ ಬಳಿ ಇರುವ ವೀಣಾ ಎಂಬವರ ಬಾಬ್ತು ಬಾಡಿಗೆ ಕೋಣೆಯಲ್ಲಿ ತಪಾಸಣೆ ನಡೆಸುವ ವೇಳೆ ಆರೋಪಿಯನ್ನು ಪತ್ತೆ ಹಚ್ಚಿದೆ.
ಬಂಧಿತನನ್ನು ಪುತ್ತೂರು ಕಬಕದ ಮಹಮ್ಮದ್ ಮುಸ್ತಪಾ (36) ಎಂದು ಗುರುತಿಸಲಾಗಿದೆ.
ಅಕ್ರಮವಾಗಿ MDMA ನ್ನು ತನ್ನ ಬಳಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.109/2025ರಂತೆ NDPS ಕಾಯ್ದೆಯ ಕಲಂ 8(C), 22(b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ ಮಹಮ್ಮದ್ ಮುಸ್ತಫಾ ವಿರುದ್ಧ ಈಗಾಗಲೇ ಅನೇಕ ಗಂಭೀರ ಪ್ರಕರಣಗಳು ದಾಖಲಾಗಿವೆ:
ಅ.ಕ್ರ.141/2015 – ಪೋಕ್ಸೊ ಪ್ರಕರಣ: ಈ ಪ್ರಕರಣದಲ್ಲಿ ಆರೋಪಿಗೆ ಮೂರು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.
ಅ.ಕ್ರ.48/2024 ಮತ್ತು 108/2024 – ಮಾದಕ ವಸ್ತು ಮಾರಾಟ ಪ್ರಕರಣಗಳು ಪುತ್ತೂರು ನಗರ ಠಾಣೆಯಲ್ಲಿ ದಾಖಲಾಗಿವೆ.
ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.













