ಪುಲ್ವಾಮದಲ್ಲಿ ಸೈನಿಕರ ಹತ್ಯೆ; ಸಕಲೇಶಪುರ ಚರ್ಚ್ ವತಿಯಿಂದ ಶ್ರದ್ಧಾಂಜಲಿ

Spread the love

ಪುಲ್ವಾಮದಲ್ಲಿ ಸೈನಿಕರ ಹತ್ಯೆ; ಸಕಲೇಶಪುರ ಚರ್ಚ್ ವತಿಯಿಂದ ಶ್ರದ್ಧಾಂಜಲಿ

ಸಕ್ಲೇಶಪುರ: ಶ್ರೀನಗರದ ಪುಲ್ವಾಮದಲ್ಲಿ ಸೈನಿಕರ ಮೇಲೆ ಉಗ್ರಗಾಮಿಗಳು ಭಯೋತ್ಪಾದನಾ ದಾಳಿ ನಡೆಸಿ 40 ಸೈನಿಕರ ಹತ್ಯೆ ನಡೆಸಿದ್ದನ್ನು ಖಂಡಿಸಿ ಹುತಾತ್ಮ ಸೈನಿಕರಿಗೆ ಸಂತಾಪ ಸೂಚಕ ಸಭೆಯನ್ನು ಸಕ್ಲೇಶಪುರ ಅವರ್ ಲೇಡಿ ಆಫ್ ಮರ್ಸಿ ಚರ್ಚ್ ವತಿಯಿಂದ ನಡೆಸಲಾಯಿತು.

ಈ ವೇಳೆ ನೆರೆದ ಕ್ರೈಸ್ತ ಸಮುದಾಯದವರು ಹಾಗೂ ಇತರ ಬಾಂಧವರು ಮೊಂಬತ್ತಿ ಹಚ್ಚುವುದರ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಅಲ್ಲದೆ ಉಗ್ರರ ಕೃತ್ಯವನ್ನು ಖಂಡಿದಿರು. ಇದೇ ವೇಳೆ ದೇಶಕ್ಕಾಗಿ ರಾತ್ರಿ ಹಗಲೆನ್ನದೆ ಸೇವೆ ಸಲ್ಲಿಸುವ ಜವಾನರ ಮೇಲೆ ನಡೆದ ಈ ಕೃತ್ಯವನ್ನು ಖಂಡಿಸಿದರಲ್ಲದೆ ಹುತಾತ್ಮ ಯೋಧರ ಕುಟುಂಬಕ್ಕೆ ಸಾಂತ್ವಾನ ದೊರಕಲಿ ಎಂದು ಹಾರೈಸಿದರು.

ಈ ವೇಳೆ ಚರ್ಚಿನ ಧರ್ಮಗುರು ವಂ|ಚಾರ್ಲ್ಸ್ ಪಿರೇರಾ, ಸಕಲೇಶಪುರ ಕ್ಯಾಥೊಲಿಕ್ ಸಂಘದ ಅಧ್ಯಕ್ಷ ಸಿಲ್ವೆಸ್ಟರ್ ಸಲ್ಡಾನಾ, ಕಮಲಮ್ಮ, ಬ್ಯಾಕರವಳ್ಳಿ ಜಯಣ್ಣ ಮತ್ತು ಹೇಮಂತ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love