ಪುಲ್ವಾಮ ಉಗ್ರರ ದಾಳಿಗೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಖಂಡನೆ

Spread the love

ಪುಲ್ವಾಮ ಉಗ್ರರ ದಾಳಿಗೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಖಂಡನೆ

ಉಡುಪಿ: ಫುಲ್ವಾಮಾದಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಇದ್ದ ವಾಹನದ ಮೇಲೆ ಉಗ್ರರು ಗುರುವಾರ ನಡೆಸಿರುವ ದಾಳಿಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ತೆಂಕನಿಡಿಯೂರು ತೀವ್ರವಾಗಿ ಖಂಡಿಸಿದ್ದು ಮೃತ ಯೋಧರ ಆತ್ಮಗಳಿಗೆ ಚಿರಶಾಂತಿಯನ್ನು ಕೋರಿದ್ದಾರೆ.

ಗುರವಾರ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿ ಸುದ್ದಿ ದೇಶಕ್ಕೆ ದೊಡ್ಡ ಆಘಾತಕಾರಿ ಸಂಗತಿಯಾಗಿದ್ದು, ದೇಶ ಕಾಯುವ ಯೋಧರನ್ನು ಗುರಿಯಾಗಿಸಿ ದಾಳಿ ನಡೆಸಿರುವ ಉಗ್ರರು ರಣಹೇಡಿಗಳು.40ಕ್ಕಿಂತ ಹೆಚ್ಚು ಯೋಧರನ್ನು ಹತ್ಯೆಗೈದ ಉಗ್ರರನ್ನು ಯಾರೂ ಕ್ಷಮಿಸಲಾಗದು. ನಮ್ಮ ಯೋಧರ ತ್ಯಾಗವನ್ನು ವ್ಯರ್ಥವಾಗಲು ಕೇಂದ್ರ ಸರಕಾರ ಬಿಡದೆ, ಭಾರತೀಯ ಸೇನೆ ಮತ್ತೊಮ್ಮೆ ಇಂತಹ ರಣಹೇಡಿ ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಬೇಕಿದ್ದು ಘಟನೆಯಲ್ಲಿ ಹುತಾತ್ಮರಾದ ಯೋಧಕ ಕುಟುಂಬದ ದುಃಖದಲ್ಲಿ ನಾವೆಲ್ಲರೂ ಭಾಗಿಗಳು. ಗಾಯಗೊಂಡವರು ಚೇತರಿಸಿಕೊಳ್ಳಲಿ ಎಂದು ಅವರು ಪ್ರಕಣೆಯಲ್ಲಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಬಸ್ಸಿನಲ್ಲಿದ್ದ 42 ಮಂದಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದು,ದೇಶದ ಸೇನಾ ಇತಿಹಾಸದಲ್ಲಿ ಅತಿ ದೊಡ್ಡ ಉಗ್ರರ ದಾಳಿ ಇದಾಗಿದೆ. ದಾಳಿಯಲ್ಲಿ 45 ಮಂದಿ ಗಾಯಗೊಂಡಿದ್ದು, 18 ಯೋಧರ ಸ್ಥಿತಿ ಗಂಭೀರವಾಗಿದೆ. ಗೋರಿಪೋರ ಪ್ರದೇಶದಲ್ಲಿ ಉಗ್ರರು ಸುಧಾರಿತ ಸ್ಫೋಟಕ ಬಳಸಿ ಸಿಆರ್ಪಿಎಫ್ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಜೈಶ್ -ಎ-ಮೊಹಮ್ಮದ್ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.


Spread the love