ಪೆರಂಪಳ್ಳಿ : ಪ್ರವಾಹಕ್ಕೆ ದಿಗ್ಬಂಧನಕ್ಕೆ ಒಳಗಾದ ವಯೋವೃದ್ಧೆ, ಪುಟ್ಟ ಮಗು ಸಹಿತ ಆರು ಜನರ ರಕ್ಷಣೆ

Spread the love

ಪೆರಂಪಳ್ಳಿ : ಪ್ರವಾಹಕ್ಕೆ ದಿಗ್ಬಂಧನಕ್ಕೆ ಒಳಗಾದ ವಯೋವೃದ್ಧೆ, ಪುಟ್ಟ ಮಗು ಸಹಿತ ಆರು ಜನರ ರಕ್ಷಣೆ

ಉಡುಪಿ: ಧಾರಾಕಾರ ಮಳೆಗೆ ಉಕ್ಕಿಹರಿದ ಸ್ವರ್ಣ ನದಿಯಲ್ಲಿ ಉಂಟಾದ ನೆರೆಯಿಂದಾಗಿ ದಿಗ್ಬಂಧನಕ್ಕೆ ಒಳಗಾದ 82 ವರ್ಷದ ವಯೋವೃದ್ಧೆ ಮತ್ತು 8 ತಿಂಗಳ ಪುಟ್ಟ ಮಗು ಸಹಿತ ಆರು ಮಂದಿಯನ್ನು ರಕ್ಷಣಾ ಸಿಬಂದಿಗಳು ಶನಿವಾರ ರಕ್ಷಣೆ ಮಾಡಿದ್ದಾರೆ.

ಭಾರಿ ಮಳೆಯ ಪರಿಣಾಮ ಉಡುಪಿಯ ಪೆರಂಪಳ್ಳಿ ಬಲೇಕುದ್ರು ಪರಿಸರದಲ್ಲಿ ಕೃತಕ ನೆರೆಯಿಂದಾಗಿ ಹಲವಾರು ಮನೆಗಳು ದಿಗ್ಬಂಧನಕ್ಕೆ ಒಳಗಾಗಿದ್ದು ನೆರೆಯಲ್ಲಿ ಸಿಲುಕಿರುವ ಕುಟುಂಬಗಳನ್ನು ಉಡುಪಿ ತಹಶೀಲ್ದಾರ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು ಅದರಂತೆ ಅತೀ ಹೆಚ್ಚು ಅಪಾಯದಲ್ಲಿದ್ದ 82 ವರ್ಷದ ವಯೋವೃದ್ಧೆ ಮತ್ತು 8 ತಿಂಗಳ ಪುಟ್ಟ ಮಗು ಸಹಿತ ಆರು ಜನರನ್ನು ರಕ್ಷಣಾ ಸಿಬಂದಿಗಳು ದೋಣಿಯ ಮೂಲಕ ಸುರಕ್ಷಿತ ಪ್ರದೇಶಕ್ಕೆ ತಂದಿದ್ದಾರೆ.


Spread the love