ಪೇಜಾವರ ಸ್ವಾಮೀಜಿಯಿಂದ ಪ್ರಧಾನಿ ನರೇಂದ್ರ ಮೋದಿ  ಭೇಟಿ

ಪೇಜಾವರ ಸ್ವಾಮೀಜಿಯಿಂದ ಪ್ರಧಾನಿ ನರೇಂದ್ರ ಮೋದಿ  ಭೇಟಿ

ನವದೆಹಲಿ: ಗುರುಪೂರ್ಣಿಮೆ ದಿನದ ನಿಮಿತ್ತ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ.

ಪೇಜಾವರ ಶ್ರೀ ಜತೆ ಮೋದಿ ಮಾತು ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ನರೇಂದ್ರ ಮೋದಿ ಗುರುಪೂರ್ಣಿಮೆ ದಿನದ ಅಂಗವಾಗಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರೊಂದಿಗೆ ಕಾಲ ಕಳೆದಿರುವುದು ನಿಜಕ್ಕೂ ಅದ್ಭುತ. ಅವರಿಂದ ಕಲಿಯುವುದು ಮತ್ತು ಅವರ ಆಲೋಚನೆಗಳನ್ನು ಕೇಳುವುದು ಬಹಳ ವಿನಮ್ರ ಅನುಭವ ಎಂದು ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.

ಐದು ವರ್ಷದ ಆಡಳಿತಕ್ಕೆ ಸ್ವಾಮೀಜಿಯವರಿಂದ ಮೋದಿಗೆ ಪ್ರಶಂಸೆ ಮಾಡಿದ ಸ್ವಾಮೀಜಿಗಳು ರಾಮ ಜನ್ಮಭೂಮಿ ವಿವಾದ, ಗಂಗಾ ಶುದ್ಧೀಕರಣ ಬಗ್ಗೆ ಸುಮಾರು ಅರ್ಧ ಗಂಟೆಗಳ ಕಾಲ ಪೇಜಾವರಶ್ರೀ- ಮೋದಿಯವರ ಜೊತೆ ಮಾತುಕತೆ ನಡೆಸಿದರು.

ಇದೇ ವೇಳ ಶ್ರೀಕೃಷ್ಣನ ಕಂಚಿನ ಮೂರ್ತಿಯನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿ ಸ್ವಾಮೀಜಿ ಮೋದಿಯವರಿಗೆ ಆಶೀರ್ವಾದ ಮಾಡಿದರು.