ಸುರತ್ಕಲ್: ಖಾಸಗಿ ಕಾರುಗಳಿಗೂ ಟೋಲ್ ಪಡೆಯುವ ನಿರ್ಧಾರದ ವಿರುದ್ದ ಬಿಜೆಪಿ ಪ್ರತಿಭಟನೆ

Spread the love

ಸುರತ್ಕಲ್: ಖಾಸಗಿ ಕಾರುಗಳಿಗೂ ಟೋಲ್ ಪಡೆಯುವ ನಿರ್ಧಾರದ ವಿರುದ್ದ ಬಿಜೆಪಿ ಪ್ರತಿಭಟನೆ

ಸುರತ್ಕಲ್ನಲ್ಲಿ ಜು.16ರರಿಂದ ಸ್ಥಳೀಯ ಖಾಸಗೀ ಕಾರುಗಳಿಗೂ ಟೋಲ್ ಪಡೆಯುವ ನಿರ್ಧಾರವನ್ನು ವಿರೋಧಿಸಿ ಭಾರತೀಯ ಜನತಾ ಪಾರ್ಟಿಯ ಮಂಗಳೂರು ನಗರ ಉತ್ತರ ಮಂಡಲ ಮತ್ತು ಮೂಲ್ಕಿ ಮೂಡಬಿದ್ರೆ ಮಂಡಲವು ಸುರತ್ಕಲ್ ಟೋಲ್ಗೇಟ್ ಮುಂಭಾಗ ಪ್ರತಿಭಟನೆ ನಡೆಸಿತು.

ಬೆಳಗ್ಗೆ ಏಳು ಗಂಟೆಯಿಂದ ಪ್ರತಿಭಟನೆ ಆರಂಭಿಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಗುತ್ತಿಗೆ ಕಂಪನಿಗಳ ವಿರುದ್ದ ಘೋಷಣೆ ಕೂಗಿದರಲ್ಲದೆ ಸ್ಥಳೀಯ ಖಾಸಗೀ ವಾಹನ ಮಾಲಕರಿಗೆ ಯಾವುದೇ ಕಾರಣಕ್ಕೂ ಟೋಲ್ ಪಾವತಿಸದಿರುವಂತೆ ಕರಪತ್ರ ಹಂಚಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಮಂಗಳೂರು ನಗರ ಉತ್ತರ ಪ್ರಧಾನ ಕಾರ್ಯದಶರ್ಿ ಅಶೋಕ್ ಕೃಷ್ಣಾಪುರ ಅವರು ಗುತ್ತಿಗೆದಾರರು ನಷ್ಟದ ನೆಪವೊಡ್ಡಿ ಸ್ಥಳೀಯರಲ್ಲಿ ಟೋಲ್ ನೆಪದಲ್ಲಿ ವಸೂಲಿಗೆ ಇಳಿದಿದ್ದಾರೆ. ಈಗಾಗಲೇ ಅಧಿಕ ಟೋಲ್ ನೀಡುವ ಸ್ಥಳೀಯರು ಮತ್ತೊಂದು ಹೊರೆ ಹೊರಲು ಖಂಡಿತಾ ಸಾಧ್ಯವಿಲ್ಲ. ಬಿಜೆಪಿ ಸ್ಥಳೀಯ ಖಾಸಗೀ ವಾಹನಗಳಿಗೆ ಟೋಲ್ ಪಡೆಯುವುದನ್ನು ವಿರೊಧಿಸುತ್ತದೆ ಮಾತ್ರವಲ್ಲ ಟೋಲ್ ರದ್ದಿಗೆ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಭರತ್ ಶೆಟ್ಟಿ ಅವರ ನೇತೃತ್ವದಲ್ಲಿ ಹೆದ್ದಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ.ಈಗಾಗಲೇ ಸಂಸದರು ಈ ನಿಟ್ಟಿನಲ್ಲಿ ಕಾಯರ್ೋನ್ಮುಖರಾಗಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಬ್ರಿಜೇಶ್ ಚೌಟ ಮಾತನಾಡಿ ಒಂದೇ ರಸ್ತೆಗೆ ಮೂರ್ನಾಲ್ಕು ಕಡೆ ಟೋಲ್ ಈಗಲೇ ಪಾವತಿಸಲಾಗುತ್ತಿದೆ. ಅತೀ ಕಡಿಮೆ

ಸಂಚಾರಕ್ಕೆ ಸ್ಥಳೀಯರೂ ಟೋಲ್ ಪಾವತಿಸುವಂತೆ ಒತ್ತಾಯಿಸುವುದು ಸರಿಯಲ್ಲ.ಈಗಿರುವ ವಿನಾಯಿತಿಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ಟೋಲ್ ಗುತ್ತಿಗೆ ಕಂಪನಿಯ ಪ್ರಬಂಧಕರನ್ನು ಕರೆಸಿ ಬಿಜೆಪಿಯ ಬೇಡಿಕೆಗಳನ್ನು ವಿವರಿಸಲಾಯಿತು. ಯಾವುದೇ ಕಾರಣಕ್ಕೂ ಸ್ಥಳೀಯ ಖಾಸಗೀ ಕಾರುಗಳಿಗೆ ಟೋಲ್ ಪಡೆಯಬಾರದು. ಹಿಂದಿನಂತೆಯೇ ಯಥಾಸ್ಥಿತಿ ಕಾಪಾಡಬೇಕು. ಮೂಲಸೌಕರ್ಯ ನೀಡುವಲ್ಲಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಈಶ್ವರ್ ಕಟೀಲ್, ಕಸ್ತೂರಿ ಪಂಜ, ಸುನಿಲ್ ಆಳ್ವ, ತಿಲಕ್ ರಾಜ್ ಕೃಷ್ಣಾಪುರ, ರಜನಿ ಗುಗ್ಗಣ್ಣ, ಗಣೇಶ್ ಹೊಸಬೆಟ್ಟು,ರಘುವೀರ್ ಪಣಂಬೂರು,ಸುಮಿತ್ರಾ ಕರಿಯಾ, ದಿವಾಕರ ಸಾಮಾನಿ,ಬೋಜರಾಜ್ ಸೂರಿಂಜೆ,ಲೋಕೇಶ್ ಬೊಳ್ಳಾಜೆ,ವಿಠಲ ಸಾಲ್ಯಾನ್, ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು, ಕಿರಣ್ ಕೋಡಿಕಲ್,ನಯನ ಕೋಟ್ಯಾನ್, ವರುಣ್ ಚೌಟ, ವಚನ್ ಮಣೈ, ರಾಘವೇಂದ್ರ ಶೆಣೈ, ಶ್ವೇತ ಮುಂಚೂರು,ಉಮೇಶ್ ದೇವಾಡಿಗ ಇಡ್ಯಾ ಸೇರಿದಂತೆ ಕಾರು ,ಆಟೋ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love