ಪೊಕಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಅಯ್ಕೆ

Spread the love

ಪೊಕಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಅಯ್ಕೆ

ಪೊಕಸ್ ಫಾರಂ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ ಸಂಸ್ಥೆಯ ವಾರ್ಷಿಕ ಮಹಾ ಸಭೆಯು ತಾರೀಕು 22/11/18ರಂದು ಹೋಟೆಲ್ ವುಡ್‍ಲ್ಯಾಂಡ್ ಸಭಾಂಗಣದಲ್ಲಿ ಜರುಗಿತು. ಸಂಸ್ಥೆಯ ಅಧ್ಯಕ್ಷರು ಯುವಜನ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೆಶಕರು ಪ್ರದೀಪ್ ಡಿಸೋಜರವರು ಮಾತಾನಾಡಿ ಈ ಸಂಸ್ಥೆಯು ಕ್ರಿಶ್ಚಿಯನ್ ಸಮುದಾಯದ ಸರಕಾರಿ ನೌಕರರು ಹಾಗೂ ಇಂಜಿನಿಯರ್ ಕಂಟ್ರಾಕ್ಟರ್ ರವರ ಒಕ್ಕೂಟದ ಸಂಸ್ಥೆಯಾಗಿದ್ದು ಈ ಸಂಸ್ಥೆಯ ಮೂಲಕ ವಿವಿಧ ಇಲಾಖೆಗಳ ನೌಕರರೊಡನೆ ಉತ್ತಮ ಭಾಂದವ್ಯ, ಜನ ಸಾಮಾನ್ಯರಿಗೆ ಸರಕಾರಿ ಕಛೇರಿಗಳ ಕೆಲಸಗಳಿಗೆ ಸ್ಪಂದಿಸುವುದು ಮತ್ತು ಸಮಾಜದ ಬಡ ವರ್ಗದ ಜನರಿಗೆ ಸಹಾಯ ಹಸ್ತ ನೀಡುತ್ತಾ ಬಂದಿದ್ದು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.  ಕಾರ್ಯದರ್ಶಿ ಮೆಸ್ಕಾಂ ಸಹಾಯಕ ಇಂಜಿನಿಯರ್ ಜೋನ್ ಡಿಸೋಜ ವಾರ್ಷಿಕ ವರದಿ ಮಂಡಿಸಿದರು.  ಖಜಾಂಜಿ ಅಲ್ವಿನ್ ಕೊಟ್ಯಾನ್ ಮೆಸ್ಕಾಂ ಲೆಕ್ಕಾಧಿಕಾರಿ ಲೆಕ್ಕ ಪತ್ರ ಮಂಡಿಸಿದರು.  ಅನಂತರ 2019-20ರ ಅವಧಿಗೆ ನೂತನ ಪಧಾಧಿಕಾರಿಗಳನ್ನು ಆರಿಸಲಾಯಿತು.

ಅಧ್ಯಕ್ಷರು : ಶ್ರೀ ಪಿಯುಸ್ ಡಿಸೋಜ – ಮೆಸ್ಕಾಂ ಲೆಕ್ಕಾಧಿಕಾರಿ

ಉಪಾಧ್ಯಕ್ಷರು: ಶ್ರೀ ರಿಚರ್ಡ್ ಡಿಸೋಜ – ಮಹಾ ನಗರ ಪಾಲಿಕೆ ಕಿರಿಯ ಇಂಜಿನಿಯರ್

ಕಾರ್ಯದರ್ಶಿ : ಶ್ರೀಮತಿ ಡೆನಿಟಾ ಡಿಸೋಜ – ಮೆಸ್ಕಾಂ ಸಹಾಯಕ ಇಂಜಿನಿಯರ್

ಸಂಯೋಜನಾ ಕಾರ್ಯದರ್ಶಿ: ಶ್ರೀ ಸಿರಿಲ್ ರಾಬರ್ಟ್ ಡಿಸೋಜ – ತೋಟಗಾರಿಕಾ ಇಲಾಖೆ ದ್ವಿತಿಯ ದರ್ಜೆ ಸಹಾಯಕರು

ಖಜಾಂಜಿ: ಶ್ರೀ ಮೆಲ್ವಿನ್ ಡಿಸೋಜ- ಮೆಸ್ಕಾಂ ಹಿರಿಯ ಸಹಾಯಕರು

ಸಂಚಾಲಕರು : ಶ್ರೀ ಸುಶೀಲ್ ನೊರೊನ್ಹ- ಇಂಜಿನಿಯರ್/ಕಂಟ್ರಾಕ್ಟರ್

ಕಾರ್ಯಕಾರಿ ಸಮಿತಿ ಸದಸ್ಯರು: ಪ್ರದೀಪ್ ಡಿಸೋಜ, ಫ್ರಾಂಕಿ ಕುಟಿನ್ಹೊ, ಮೌರಿಸ್ ಡಿಸೋಜ, ಬಾಸಿಲ್ ರೊಡ್ರಿಗಸ್, ಜೋನ್ ಡಿಸೋಜ, ಅಲ್ವಿನ್ ಕೊಟ್ಯಾನ್, ಅನಿಲ್ ವಾಸ್, ರೋಶನ್ ಫೆರಾವೊ, ಶ್ರೀಮತಿ ಮೇರಿ ಡಾಯಸ್


Spread the love