ಪೊಪ್ಯುಲರ್ ಫ್ರಂಟ್ ನಿಂದ ರಂಝಾನ್ ಕಿಟ್ ವಿತರಣೆ

Spread the love

ಪೊಪ್ಯುಲರ್ ಫ್ರಂಟ್ ನಿಂದ ರಂಝಾನ್ ಕಿಟ್ ವಿತರಣೆ

ಮಂಗಳೂರು : ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂUಳೂರು ವತಿಯಿಂದ ಉಳ್ಳಾಲ,ಮೂಡಬಿದ್ರೆ, ಬೆಂಗರೆ, ಮುಲ್ಕಿ, ಮಂಗಳೂರು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಈ ಬಾರಿ ನೂರಕ್ಕಿಂತ ಹೆಚ್ಚು ಕುಟುಂಬಗಳಿಗೆ ಸುಮಾರು ರೂ ಎರಡು ಲಕ್ಷ ಮೌಲ್ಯದ ರಂಝಾನ್ ತಿಂಗಳ ಇಫ್ತಾರ್ ಅಹಾರ ಸಮಾಗ್ರಿಗಳನ್ನು ವಿತರಿಸಲಾಯಿತು.

ಮಂಗಳೂರಿನ ಕಛೇರಿಯಲ್ಲಿ ಕಿಟ್ ವಿತರಿಸುವ ಮೂಲಕ ಜಿಲ್ಲಾದ್ಯಕ್ಷ ನವಾಝ್ ಉಳ್ಳಾಲ ಚಾಲನೆ ನೀಡಿದರು ಜಿಲ್ಲಾ ಕಾರ್ಯದರ್ಶಿ ಕಾದರ್ ಕೆ, ಸಿರಾಜ್ ಕಾವೂರು,ಸದಸ್ಯರಾದ ಶರೀಫ್, ಅಬೂಬಕ್ಕರ್,ಇಸ್ಮಯೀಲ್ ಪುತ್ತೂರು,ಸಿದ್ದೀಕ್ ಉಳ್ಳಾಲ,ಅಬೂಬಕ್ಕರ್ ಹಾಜಿ, ಇಕ್ಬಾಲ್, ಸಾದಿಕ್,ಹಾರಿಸ್ ಮಲಾರ್,ಹರ್ಶಾದ್ ಮಂಗಳೂರು ಉಪಸ್ಥಿತಿಯಿದ್ದರು.


Spread the love