ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಬಾಕ್ಸಿಗೆ ಬೈಕ್ ಡಿಕ್ಕಿ ಹೊಡೆದು ಯುವಕ ದುರ್ಮರಣ

Spread the love

ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಬಾಕ್ಸಿಗೆ ಬೈಕ್ ಡಿಕ್ಕಿ ಹೊಡೆದು ಯುವಕ ದುರ್ಮರಣ

ಮಂಗಳೂರು: ಬೈಕೊಂದು ಪೋಲಿಸ್ ಟ್ರಾಫಿಕ್ ಕಂಟ್ರೋಲ್ ಬಾಕ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 23 ವರ್ಷದ ಯುವಕನೋರ್ವ ಸೋಮವಾರ ನಸುಕಿನಲ್ಲಿ ಸಾವನಪ್ಪಿದ್ದ ಘಟನೆ ಬೆಂದೂರು ಬಳಿ ನಡೆದಿದೆ.

ಮೃತ ಯುವಕನ್ನನ್ನು ಯೆಯ್ಯಾಡಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಗೊಡ್ವಿನ್ ಮಿನೇಜಸ್ (23) ಎಂದು ಗುರುತಿಸಲಾಗಿದೆ. ಮೃತ ಗೋಡ್ವಿನ್ ಮಂಗಳೂರಿನಲ್ಲಿ ಸೇಲ್ಸ್ ಸುಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ಮಾಹಿತಿಗಳ ಪ್ರಕಾರ ಗೊಡ್ವಿನ್ ಮತ್ತು ಗ್ರೆಗೋರಿ ಎಂಬ ಇಬ್ಬರು ಸೋಮವಾರ ನಸು ರಾತ್ರಿ 12.15 ರ ಸುಮಾರಿಗೆ ಬೆಂದೂರ್ ವೆಲ್ ನಿಂದ ಯೆಯ್ಯಾಡಿಕಡೆಗೆ ಬೈಕಲ್ಲಿ ತೆರಳುತ್ತಿದ್ದ, ನಿಯಂತ್ರಣ ತಪ್ಪಿದ ಬೈಕ್ ಪೋಲಿಸ್ ಟ್ರಾಫಿಕ್ ಕಂಟ್ರೊಲ್ ಬಾಕ್ಸಿಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ.

ಘಟನೆಯಲ್ಲಿ ಗೋಡ್ವಿನ್ ರಸ್ತೆಗೆ ಎಸೆಯಲ್ಪಟ್ಟಿದ್ದು, ಕೂಡಲೇ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಬೈಕ್ ಸವಾರ ಗ್ರೆಗೋರಿ ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮಂಗಳೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love